ಹೊಸ ದಿಗಂತ ವರದಿ, ಹಾವೇರಿ (ಗುತ್ತಲ) :
ತಾಲೂಕಿನ ಬಸಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ 2 ದಿನದ ಹಿಂದೆ ಪ್ರೇಮಿಗಳಿ ಬ್ಬರು ವಿಷ ಸೇವೆಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ನೇತ್ರಾ ಬಾಳಿಕಾಯಿ (18) ಹಾಗೂ ಪ್ರವೀಣ ಬಾಗಿಲದ ಎಂದು ಗುರುತಿಸಲಾಗಿದೆ. ನೇತ್ರಾಳು ತಾಲೂಕಿನ ಹಳೇರಿತ್ತಿ ಗ್ರಾಮದ ಅವರ ಸಂಬಂಧಿಕರ ಮನೆಯಲ್ಲಿದ್ದ ಸಂದರ್ಭದಲ್ಲಿ ಪ್ರವೀಣನ ಪರಿಚಯವಾಗಿ ಮುಂದೆ ಇವರಿಬ್ಬರ ನಡುವೆ ಶ್ನೇಹವಾಗಿ ಪರಿವರ್ತಯಾಗಿತ್ತು.
ಈ ವಿಷಯ ನೇತ್ರಾಳ ಸಂಬಂಧಿಗಳಿಗೆ ತಿಳಿದಾಗ ಅವಳಿಗೆ ಬುದ್ಧಿವಾದ ಹೇಳಿ ಅವಳ ತಂದೆಯೂರಿಗೆ ಕಳಿಸಿದ್ದರು. ನೇತ್ರಾ ಪ್ರಸಕ್ತ ವರ್ಷ ಎರಡನೇ ಪಿಯುಸಿಯನ್ನು ನಗರದ ಇಜಾರಿ ಲಕಮಾಪುರದಲ್ಲಿನ ಸರ್ಕಾರಿ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬಸ್ ಪಾಸ್ಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಹೊಂದಿಸುವುದಕ್ಕೆ ಹಾವೇರಿಗೆ ಹೋಗಿ ಬರುವದಾಗಿ ಮನೆಯವರಿಗೆ ತಿಳಿಸಿ ಹಾವೇರಿಗೆ ಬಂದಿದ್ದಳು.
ಈ ಸಂದರ್ಭದಲ್ಲಿ ಪ್ರವೀಣನು ನೇತ್ರಾಳನ್ನು ಬೈಕ್ದಲ್ಲಿ ಕರೆದುಕೊಂಡು ಬಸಾಪುರ ಗ್ರಾಮದ ಅಡವಿಗೆ ಕರೆದುಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಅವರಿಬ್ಬರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.