ಬಿಎಸ್‌ಎಫ್‌ನ ಹೆಚ್ಚುವರಿ ಮಹಾನಿರ್ದೇಶಕರಾಗಿ ಸುಜೋಯ್ ಲಾಲ್ ಥಾಸೆನ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಜೋಯ್ ಲಾಲ್ ಥಾಸೆನ್ ಅವರನ್ನು ಬಿಎಸ್‌ಎಫ್‌ನ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಿಸಿ ಕೇಂದ್ರಸರ್ಕಾರ ಆದೇಶ ನೀಡಿದೆ.

ಸುಜೋಯ್ ಲಾಲ್ ಸಿಆರ್‌ಪಿಎಫ್‌ನ ಮುಖ್ಯಸ್ಥರಾಗಿದ್ದರು. ಇದೀಗ ಸುಜೋಯ್ ಲಾಲ್‌ಗೆ ಬಿಎಸ್‌ಎಫ್‌ ಡಿಜಿ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಗಿದೆ.

ಸಿಆರ್‌ಪಿಎಫ್ ಮಹಾನಿರ್ದೇಶಕ (ಡಿಜಿ) ಸುಜೋಯ್ ಲಾಲ್ ಥಾಸೆನ್ ಅವರಿಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಡಿಜಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ನೀಡಲಾಗಿದ್ದು, ಡಿಸೆಂಬರ್ 31 ರಂದು ಹಾಲಿ ಪಂಕಜ್ ಕುಮಾರ್ ಸಿಂಗ್ ಅವರು ನಿವೃತ್ತಿ ಹೊಂದಿದರು.

ಪಂಕಜ್ ಸಿಂಗ್, 1988-ಬ್ಯಾಚ್ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ರಾಜಸ್ಥಾನ ಕೇಡರ್‌ನವರು ಈ ಡಿಸೆಂಬರ್‌ನಲ್ಲಿ ಬಿಎಸ್‌ಎಫ್ ಮುಖ್ಯಸ್ಥರಾಗಿ 1.4 ವರ್ಷಗಳ ಸುದೀರ್ಘ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಾರೆ. ಅವರು ಕಳೆದ ವರ್ಷ ಆಗಸ್ಟ್ 31 ರಂದು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.

ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಮುಖ್ಯಸ್ಥ ಥಾಸೆನ್ ಅವರು ಮಧ್ಯಪ್ರದೇಶ ಕೇಡರ್‌ನ ಸಿಂಗ್ ಅವರ ಬ್ಯಾಚ್‌ಮೇಟ್ ಆಗಿದ್ದು, ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಮುಂದಿನ ಆದೇಶದವರೆಗೆ ಅವರು ಬಿಎಸ್‌ಎಫ್ ಡಿಜಿಯ ಹೆಚ್ಚುವರಿ ಚಾರ್ಜ್ ಅನ್ನು ಹೊಂದಿರುತ್ತಾರೆ.

ಶನಿವಾರ (ಡಿಸೆಂಬರ್ 31)ಸಿಂಗ್ ಅವರು ಪಡೆಯ ಬೀಳ್ಕೊಡುಗೆ ಪರೇಡ್ ಅನ್ನು ಪರಿಶೀಲಿಸಿದ ನಂತರ ಇಬ್ಬರು ಅಧಿಕಾರಿಗಳ ನಡುವೆ ಅಧಿಕಾರ ಹಸ್ತಾಂತರವನ್ನು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!