ಹೊಸದಿಗಂತ ಡಿಜಿಟಲ್ ಡೆಸ್ಕ್:
200 ಕೋಟಿ ರೂ. ವಂಚನೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ನಟಿ ನೋರಾ ಫತೇಹಿ, ಜಾಕ್ವೆಲೀನ್ ಫರ್ನಾಂಡಿಸ್ ಸುದ್ದಿಯಲ್ಲಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಇದೀಗ ನೋರಾ ವಂಚನೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಾನು ಮನೆ ಕೊಡಿಸ್ತೇನೆ ಎಂದು ಹೇಳಿದ್ದೆ ಎಂದು ನೋರಾ ಹೇಳಿದ್ದಾರೆ ಆದರೆ ಕ್ಯಾಸಬ್ಲಾಂಕಾ, ಮೊರಕ್ಕೊದಲ್ಲಿ ಮನೆ ತೆಗೆದುಕೊಳ್ಳಲು ಕೋಟಿ ಕೋಟಿ ಸಾಲ ಪಡೆದಿದ್ದಾರೆ. ಬಚಾವ್ ಆಗೋದಕ್ಕೆ ಸುಳ್ಳು ಕಥೆ ಕಟ್ಟುತ್ತಿದ್ದಾರೆ.
ಕಾರ್ ಪಡೆದಿಲ್ಲ ಅನ್ನೋದು ಸುಳ್ಳು ನಾನು ಬಿಎಂಡಬ್ಲೂ ಕೊಡಿಸಿದ್ದೇನೆ, ಅವರು ಭಾರತೀಯರಲ್ಲದ ಕಾರಣ ನನ್ನ ಸ್ನೇಹಿತೆಯ ಗಂಡನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸೋಕೆ ನೋರಾ ಹೇಳಿದ್ದರು ಎಂದು ಆರೋಪಿಸಿದ್ದಾರೆ.