ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ನಟ ಸಂಚಾರಿ ವಿಜಯ್ ನಿಧನಕ್ಕೆ ಸಿನಿರಂಗ ಕಂಬನಿ ಮಿಡಿಯುತ್ತಿದೆ.
‘ಸಂಚಾರಿ ವಿಜಯ್ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಒಬ್ಬ ಅದ್ಭುತ ಕಲಾವಿದೆ ಹಾಗೂ ಸ್ನೇಹಜೀವಿ. ಸತ್ಯ ಹರೀಶ್ಚಂದ್ರ ಸಿನಿಮಾ ಶೂಟಿಂಗ್ ಸಮಯವನ್ನು ಸದಾ ನೆನೆಯುತ್ತೇನೆ, ನಿಮಗೆ ಸರಿಸಾಟಿ ಯಾರೂ ಇಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ‘ಎಂದು ಹೇಳಿದ್ದಾರೆ.
ಸಂಚಾರಿ ವಿಜಯ್ ಸರ್ ನಿಧನರಾದ ವಿಷಯ ತಿಳಿದು ತುಂಬಾ ಬೇಸರಗೊಂಡಿದ್ದೇನೆ!
ಒಬ್ಬ ಅದ್ಭುತ ಕಲಾವಿದ ಹಾಗೂ ಸ್ನೇಹಜೀವಿ🙏Remembering our days from working together in 'Satya Harishchandra' movie. His talent is unmatchable! Will miss him a lot
ಓಂ ಶಾಂತಿ 🙏 pic.twitter.com/CECpXUPQRI
— Sharaan (@realSharaan) June 14, 2021
ಈ ಬಗ್ಗೆ ಸುಮಲತಾ ಅಂಬರಿಷ್ ಕೂಡ ಟ್ವೀಟ್ ಮಾಡಿದ್ದು, ‘ನಟ ಸಂಚಾರಿ ವಿಜಯ್ ಇನ್ನಿಲ್ಲ ಅನ್ನೋದನ್ನು ನಂಬೋಕೆ ಆಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದ್ದರು. ಈ ಆಘಾತ ಅವರ ಕುಟುಂಬ ಹಾಗೂ ಪ್ರೀತಿ ಪಾತ್ರರಿಗೆ ಭರಿಸುವ ಶಕ್ತಿ ನೀಡಲಿ. ಅವರ ಸಾಧನೆ ಎಂದೆಂದೂ ಅಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ’ ಎಂದಿದ್ದಾರೆ.
ನಟ ಸಂಚಾರಿ ವಿಜಯ್ ಅಸುನೀಗಿದ ಸುದ್ದಿ ನಿಜಕ್ಕೂ ನಂಬಲಾಗದು. ಚಿಕ್ಕ ವಯಸ್ಸಿನಲ್ಲೇ ತಮ್ಮ ನಟನೆಗೆ ರಾಷ್ಟ್ರ ಪ್ರಶಸ್ತಿ ಗಳಿಸಿ ಇಡೀ ಕನ್ನಡ ಚಿತ್ರರಂಗಕ್ಕೆ ಗೌರವ ತಂದಕೊಟ್ಟರು. ಈ ಆಘಾತ ಅವರ ಕುಟುಂಬ ಹಾಗೂ ಪ್ರೀತಿ ಪಾತ್ರರಿಗೆ ಭರಿಸುವ ಶಕ್ತಿ ನೀಡಲಿ. ಅವರ ಸಾಧನೆ ಎಂದೆಂದೂ ಅಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. 🙏🙏 pic.twitter.com/0arJs7Ri2j
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) June 14, 2021