Saturday, August 13, 2022

Latest Posts

ಸ್ವಾಭಿಮಾನಿ ಪಕ್ಷವೊಂದು ಕಟ್ಟಿ ಅಕ್ಕ ಎಂದ ಅಭಿಮಾನಿಗಳಿಗೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಿಎಂ ಎಚ್​​.ಡಿ ಕುಮಾರಸ್ವಾಮಿ ವಿರುದ್ಧ ಮಾಡುತ್ತಿರುವ ಪ್ರತಿಭಟನೆಗೆ ನನ್ನ ಬೆಂಬಲವಿಲ್ಲ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಂಬರೀಶ್​​​​ ಹೆಸರನ್ನು ಬಳಸಿಕೊಂಡಿದ್ದರಿಂದ ಅಭಿಮಾನಿಗಳಿಗೆ ನೋವಾಗಿದೆ ಎಂದು ಸಂಸದೆ ಸುಮಲತಾ ಹೇಳಿದರು.

ಬೆಂಗಳೂರು ನಗರದ ಕಂಠೀರವ ಸ್ಟುಡಿಯೋದಲ್ಲಿರುವ ರೆಬೆಲ್​ ಸ್ಟಾರ್​​ ಅಂಬರೀಶ್ ಸಮಾಧಿಗೆ ಭೇಟಿ ನೀಡಿದ ವೇಳೆ ಇಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನೋಡಿ ಭಾವುಕರಾದರು. ಈ ವೇಳೆ ಅಭಿಮಾನಿಗಳು ಅಂಬರೀಶ್​​ ಅಣ್ಣನಿಗೆ ಬೇಕಾದ್ರೆ ನಮ್ಮ ಪ್ರಾಣ ನೀಡಲು ಸಿದ್ಧ ಎಂದು ಘೋಷಣೆ ಕೂಗಿದ್ದಾರೆ.

ಈ ವೇಳೆ ಮಾತನಾಡಿದ ಸುಮಲತಾ, ಅಂಬರೀಶ್​​ ನಿಮ್ಮ ಅಭಿಮಾನದ ಪ್ರೀತಿಯಿಂದಲೇ ಬೆಳೆದವರು. ಅಂಬರೀಶ್ರ ದಾರಿಯಲ್ಲೇ ಹೋಗುತ್ತೇನೆ. ನನ್ನ ಗಂಡನ ಹೆಸರನ್ನು ಕಾಪಾಡುತ್ತೇನೆ. ನಿಮ್ಮ ಈ ಅಭಿಮಾನವೇ ನನಗೆ ಶಕ್ತಿ ಎಂದು ಕೈ ಮುಗಿದರು.

ಇನ್ನು, ನೀವು ಸ್ವಾಭಿಮಾನಿ ಪಕ್ಷವೊಂದು ಕಟ್ಟಿ ಅಕ್ಕ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್, ಯಾರೂ ಕೆಟ್ಟ ದಾರಿಯಲ್ಲಿ ಹೋಗುವುದು ಬೇಡ. ನಿಮ್ಮ ಪರವಾಗಿ ನಾನು ಕೆಲಸ ಮಾಡುತ್ತೇನೆ. ಭಗವಂತ ಇದ್ದಾನೆ, ಅವನೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದರು. ಆಗ ಸುಮಲತಾ ಅವರ ಹೇಳಿಕೆಗೆ ಅಭಿಮಾನಿಗಳು ನಮ್ಮ ಪ್ರಾಣವೇ ನಿಮ್ಮದಕ್ಕ ಎಂದು ಅಭಿಮಾನ ತೋರಿದರು.

ಕೆಆರ್​ಎಸ್​ ಡ್ಯಾಂಗೆ ಡ್ಯಾಮೇಜ್​ ಆಗುತ್ತಿರುವುದರ ವಿರುದ್ಧ ಮಾತಾಡುತ್ತಿದ್ದೇನೆ. ನನಗೀಗ ದಿನನಿತ್ಯ ನೂರಾರು ಫೋನ್​ಗಳು ಬರುತ್ತಿವೆ. ಎಲ್ಲರಿಗೂ ಅಕ್ರಮ ನಡೆಯುತ್ತಿರುವುದನ್ನು ನಿಲ್ಲಿಸಿ ಎಂದು ಕೇಳಿಕೊಂಡಿದ್ದೇನೆ. ಈಗ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಅಕ್ರಮ ಗಣಿಗಾರಿಕೆ ಕುರಿತಾದ ಮಾಹಿತಿ ನನಗೆ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss