ಭಯಂಕರ ಬಿಸಿಲು ಆರಂಭವಾಗಿಬಿಟ್ಟಿದೆ. ಬಿಸಿಲಿನಲ್ಲಿ ಸ್ವಲ್ಪ ದೂರ ನಡೆದರೂ ಸಾಕು ದಣಿವಾಗಿ , ಮುಖ ಕೆಂಪಾಗುತ್ತದೆ. ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಚರ್ಮವು ಕಪ್ಪಾಗುತ್ತದೆ. ಚರ್ಮ ಕಪ್ಪಾದ ಮೇಲೆ ಸರಿ ಮಾಡಿಕೊಳ್ಳಿಲು ಒದ್ದಾಡುವ ಬದಲು, ಟ್ಯಾನ್ ಆಗುವ ಮೊದಲೇ ಎಚ್ಚೆತ್ತುಕೊಳ್ಳಿ. ಬಿಸಿಲಿಗಿಳಿಯುವ ಮೊದಲು ಈ ಕೆಳಗಿನ ಟಿಪ್ಸ್ ಅನುಸರಿಸಿ…
ಸನ್ಸ್ಕ್ರೀನ್ ಬಳಸಿ:
ಬಿಸಿಲು ಅತ್ಯಂತ ಹೆಚ್ಚಾಗಿ ಪರಿಣಾಮ ಬೀರುವುದು ನಮ್ಮ ತ್ವಚೆಯ ಮೇಲೆ. ಅದನ್ನು ಕಾಪಾಡಿಕೊಳ್ಳಲು ಮನೆಯಿಂದ ಹೊರಹೋಗುವ ಮೊದಲು ಸನ್ಸ್ಕ್ರೀನ್ ಬಳಸಿ. ಅದು ಬಿಸಿಲಿನಿಂದ ನಿಮ್ಮ ತ್ಚಚೆಯನ್ನು ಕಾಪಾಡಬಲ್ಲದು.
ಚರ್ಮ ಮುಚ್ಚುವ ಬಟ್ಟೆ ಬಳಸಿ:
ಎಲ್ಲಕಿಂತ ಮುಖ್ಯವಾಗಿ ಬಿಸಿಲು ನಿಮ್ಮ ಚರ್ಮಕ್ಕೆ ಅಥವಾ ದೇಹಕ್ಕೆ ತಾಕದ ಹಾಗೆ ಬಟ್ಟೆಗಳನ್ನು ಧರಿಸಿ. ಫುಲ್ ತೋಳಿನ ಬಟ್ಟೆಗಳನ್ನು ಬಳಸಿರಿ.
ಹ್ಯಾಟ್ ಬಳಸಿ:
ಸೂರ್ಯನ ಕಿರಣಗಳು ನೇರವಾಗಿ ನೆತ್ತಿಗೆ ತಾಕುವುದರಿಂದ ಕೂದಲು ಬಲಹೀನಗೊಳ್ಳುತ್ತವೆ ಹಾಗೂ ಕೂದಲು ಉದುರಲು ಆರಂಭಿಸುತ್ತದೆ. ಹಾಗಾಗಿ ಬಿಸಿಲಿನಿಂದ ಕೂದಲನ್ನು ರಕ್ಷಣೆ ಮಾಡಲು ಯಾವಾಗಲೂ ಹ್ಯಾಟ್ ಧರಿಸಿ.
ದ್ರವ ಪದಾರ್ಥ ಸೇವನೆ:
ಬೇಸಿಗೆಯಲ್ಲಿ ದೇಹದ ತೇವಾಂಶ ಕಡಿಮೆಯಾಗುತ್ತದೆ. ಆದ್ದರಿಂದ ದೇಹಕ್ಕೆ ಬೇಕಾಗಿರುವಂತಹ ನೀರಿನ ಅಂಶ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸಿ. ಅದರಲ್ಲೂ ನೀವು ಬಿಸಿಲಿಗೆ ಇಳಿಯುವ ಮೊದಲೇ ಹೆಚ್ಚು ದ್ರವ ಪದಾರ್ಥವನ್ನು ಸೇವಿಸೆ. ಬಿಸಿಲಿನಿಂದ ಬಂದ ತಕ್ಷಣ ದ್ರವ ಪದಾರ್ಥ ಸೇವಿಸಿದರೆ ನೆಗಡಿ ಆಗುವ ಚಾನ್ಸ್ ಇರುತ್ತದೆ.
ಛತ್ರಿ:
ಯಾವಾಲೂ ನಿಮ್ಮ ಬ್ಯಾಗ್ ನಲ್ಲಿ ಛತ್ರಿ ಇರಲಿ. ಅದರಲ್ಲೂ ಬೇಸಿಗೆಯಲ್ಲಿ ಛತ್ರಿ ಮಿಸ್ ಮಾಡದೇ ತೆಗೆದುಕೊಂಡು ಹೋಗಿ.
ಎಣ್ಣೆ ಮಸಾಜ್:
ಮೊದಲೇ ಹೇಳಿದ ಹಾಗೆ ಬೇಸಿಗೆಯಲ್ಲಿ ದೇಹದ ತೇವಾಂಶ ಕಡಿಮೆಯಾಗುತ್ತದೆ. ಅದಲ್ಲದೇ ಬಿಸಿಲಿನ ಬೇಗೆಗೆ ತಲೆಯು ಸಹ ಬಿಸಿಯಾಗಿ ಭಾರವಾಗಿ ತಲೆಗೂದಲು ಉದುತ್ತಿರುತ್ತವೆ. ಅದಕ್ಕಾಗಿ ವಾರಕ್ಕೊಮ್ಮೆಯಾದರೂ ತಲೆಗೆ ಎಣ್ಣೆ ಮಸಾಜ್ ಮಾಡಿಕೊಳ್ಳಿ.