Sunday, August 14, 2022

Latest Posts

SUMMER TIP: ಬೇಸಿಗೆಯಲ್ಲಿ ದೇಹ ಅಷ್ಟೇ ಅಲ್ಲ ಮುಖವನ್ನು ಹೆಲ್ತಿಯಾಗಿಟ್ಟುಕೊಳ್ಳಿ.. ಹೇಗೆ ನೋಡಿ..

ಬೇಸಿಗೆಯಲ್ಲಿ ದೇಹದ ಆರೋಗ್ಯದ ಬಗ್ಗೆ ಯೋಚಿಸುವಂತೆ ತ್ವಚೆಯ ಆರೋಗ್ಯದ ಬಗ್ಗೆಯೂ ಆಲೋಚಿಸಬೇಕು. ಬೇಸಿಗೆಯಲ್ಲಿ ಚರ್ಮ ಯಾವಾಗಲೂ ಒಡೆದಂತೆ ಇರುತ್ತದೆ. ಡ್ರೈ ಆಗಿ ಕೂಡ ಕಾಣುತ್ತದೆ. ಬೇಸಿಗೆಯಲ್ಲಿ ನಿಮ್ಮ ತ್ವಚೆಯನ್ನು ಕೇರ್ ಮಾಡೋದು ಹೀಗೆ..

  • ಸ್ಕ್ರಬ್ ಮಾಡಿ: ನಿಮ್ಮ ತ್ಚಚೆಯಲ್ಲಿ ಡೆಡ್ ಸೆಲ್ಸ್ ಇರುತ್ತವೆ. ಇದರ ಮೇಲೆ ನೀವು ಎಷ್ಟು ಕ್ರೀಂ ಹಚ್ಚಿದರೂ ಅದು ವೆಸ್ಟ್. ಮೊದಲು ಸ್ಕ್ರಬ್ ಮಾಡಿ ನಂತರ ಕ್ರೀಂ ಹಚ್ಚಿ.
  • ಸನ್‌ಸ್ಕ್ರೀನ್: ಸನ್‌ಸ್ಕ್ರೀನ್ ಅವಶ್ಯವಿಲ್ಲ. ನಾನು ಟ್ಯಾನ್ ಆಗುವುದಿಲ್ಲ ಎಂದೆಲ್ಲಾ ಅಂದುಕೊಳ್ಳಬೇಡಿ. ಖಂಡಿತಾ ಈ ಬಿಸಿಲಿಗೆ ಟ್ಯಾನ್ ಆಗುತ್ತೀರಿ. ಹಾಗಾಗಬಾರದು ಎಂದರೆ ಹೊರಗೆ ಹೋಗುವಾಗ ಅಥವಾ ಮನೆಯಲ್ಲಿ ಇರುವಾಗ ಸನ್‌ಸ್ಕ್ರೀನ್ ಹಚ್ಚಿ.
  • ಅತಿ ಹೆಚ್ಚು ಮೇಕಪ್ ಬೇಡ: ಹೆಚ್ಚು ಮೇಕಪ್ ಮಾಡುವ ಅವಶ್ಯಕತೆ ಇಲ್ಲ. ನೀವು ಮಾಡಿದ ಮೇಕಪ್ ಬೆವರ ಜೊತೆ ಸೇರಿ ಪ್ಯಾಚಿಯಾದಂತೆ ಕಾಣುತ್ತದೆ.
  • ನೀರು ಕುಡಿಯಿರಿ: ದಿನಕ್ಕೆ ಕಡಿಮೆ ಎಂದರೂ ಎಂಟು ಲೋಟ ನೀರು ಕುಡಿಯಿರಿ. ಒಳಗಿನಿಂದ ತ್ವಚೆಯ ರಕ್ಷಣೆ ಮಾಡುವುದು ತುಂಬಾ ಮುಖ್ಯ.
  • ಬಾಡಿ ಲೋಶನ್: ಚಳಿಗಾಲ ಇಲ್ಲ, ಚರ್ಮ ಒಡೆಯುವುದಿಲ್ಲ ಎಂದು ಬಾಡಿ ಲೋಶನ್ ಬಿಟ್ಟುಬಿಡಬೇಡಿ. ಬಾಡಿ ಲೋಶನ್ ಹಚ್ಚುವುದರಿಂದ ನಿಮ್ಮ ಸ್ಕಿನ್ ಹೈಡ್ರೇಟ್ ಆಗಿರುತ್ತದೆ. ಇದು ತುಂಬಾನೇ ಮುಖ್ಯ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss