ಆಲೂಗೆಡ್ಡೆ ಬರೀ ಆಹಾರವಾಗಿರದೆ ಅದು ತ್ವಚೆಯ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಆಲೂಗೆಡ್ಡೆ ಫೇಸ್ಪ್ಯಾಕ್ ಬಳಸಿರಿ. ಬೇಸಿಗೆಯಲ್ಲಿ ಮೂಖವನ್ನು ಎಷ್ಟು ಸುರಕ್ಷಿತವಾಗಿಟ್ಟುಕೊಂಡರೂ ಕಡಿಮೆಯೇ. ಸ್ವಲ್ಪ ಬಿಸಿಲಿಗೆ ಇಳಿದರೂ ಟ್ಯಾನ್ ಆಗುತ್ತೆ. ನೀವು ವಾರದಲ್ಲಿ 2 ಸಲ ಆಲೂಗಡ್ಡೆ ಪ್ಯಾಕ್ ಬಳಸಿದರೂ ಸಾಕು. ನಿಮ್ಮ ಮುಖ ಹೆಲ್ತಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿ:
ಆಲೂಗಡ್ಡೆ
ಮೊಸರು
ಉಗುರು ಬಿಸಿ ನೀರು
ಮಾಡುವ ವಿಧಾನ:
ಒಂದಿಷ್ಟು ಆಲೂಗಡ್ಡೆಯ ಚೂರುಗಳನ್ನು ತೆಗೆದುಕೊಂಡು ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿಕೊಂಡ ಆಲೂಗಡ್ಡೆಯ ಪೇಸ್ಟ್ ಗೆ 2 ಟೀ ಚಮಚ ಮೊಸರನ್ನು ಸೇರಿಸಿ. ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ 10-15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ.
ವಾರಕ್ಕೆ ಎರಡು ಬಾರಿ ಈ ಫೇಸ್ ಪ್ಯಾಕ್ನ್ನು ಬಳಸುವುದರಿಂದ ಚರ್ಮವು ಕಾಂತಿಯುಕ್ತವಾಗಿರುತ್ತದೆ.