ಬ್ರಿಟನ್ ಪ್ರಧಾನಿಯಾಗಿ ಸುನಕ್: ಚಿದಂಬರಂ, ತರೂರ್ ಹೇಳಿಕೆಗೆ ಸಿಡಿಮಿಡಿಗೊಂಡ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಲ್ಪಸಂಖ್ಯಾತ ರಿಷಿ ಸುನಕ್ ಬ್ರಿಟನ್ ನ ಪ್ರಧಾನಿಯಾಗಿದ್ದು, ಇದರಿಂದ ಭಾರತ ಪಾಠ ಕಲಿಯಬೇಕು ಎಂದ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ ಮತ್ತು ಶಶಿ ತರೂರ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

ಭಾರತದಲ್ಲಿ ಈ ಹಿಂದೆ ಹಲವು ಅಲ್ಪಸಂಖ್ಯಾತರು ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಯಾಗಿರುವುದರಿಂದ ಬೇರೆ ದೇಶದಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ತಮ್ಮ ನಾಯಕರ ವಿರುದ್ಧವೇ ಕಾಂಗ್ರೆಸ್ ಅಸಮಾಧಾನಗೊಂಡಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಹಲವು ವರ್ಷಗಳಿಂದ ವೈವಿಧ್ಯತೆಯನ್ನು ಗೌರವಿಸುವುದು ಭಾರತದ ವೈಶಿಷ್ಟವಾಗಿದೆ ಮತ್ತು ಹಲವಾರು ವರ್ಷಗಳಿಂದ ದೇಶದಲ್ಲಿ ಉನ್ನತ ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸಿದ ಜಾಕೀರ್ ಹುಸೇನ್, ಫಕ್ರುದ್ದೀನ್ ಅಲಿ ಅಹಮದ್ ಮತ್ತು ಎಪಿಜೆ ಅಬ್ದುಲ್ ಕಲಾಂ ಇದಕ್ಕೆ ಉತ್ತಮ ಉದಾಹರಣೆ ಎಂದಿದ್ದಾರೆ.

ಭಾರತೀಯ ಮೂಲದ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಮಾಡಿದ ನಂತರ, ಚಿದಂಬರಂ ಮತ್ತು ತರೂರ್ ಅವರು ‘ಭಾರತವು ಬ್ರಿಟನ್ ನಿಂದ ಪಾಠ ಕಲಿಯಬೇಕು’ ಎಂದು ಹೇಳಿದ್ದರು.

ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಜೈರಾಮ್ ರಮೇಶ್, ನಮ್ಮ ದೇಶದಲ್ಲಿ 1967 ರಲ್ಲಿ ಡಾ.ಜಾಕೀರ್ ಹುಸೇನ್ ಅವರು ಮೊದಲ ಅಲ್ಪಸಂಖ್ಯಾತ ರಾಷ್ಟ್ರಪತಿಯಾದರು. ನಂತರ ಫಕ್ರುದ್ದೀನ್ ಅಲಿ ಅಹಮದ್ ಮತ್ತು ಡಾ.ಅಬ್ದುಲ್ ಕಲಾಂ ರಾಷ್ಟ್ರಪತಿಯಾದರು. ನಾನು ನಿಮಗೆ ಉದಾಹರಣೆಗಳನ್ನು ನೀಡುತ್ತಾ ಹೋದರೆ ಬರ್ಕತುಲ್ಲಾಖಾನ್ ಮುಖ್ಯಮಂತ್ರಿಯಾದರು ಮತ್ತು ಎಆರ್ ಅಂತುಲೇ ಮುಖ್ಯಮಂತ್ರಿಯಾದರು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!