Monday, July 4, 2022

Latest Posts

ಏಪ್ರಿಲ್ 20 ರಿಂದ ತಮಿಳುನಾಡಿನಲ್ಲಿ ಸಂಡೇ ಲಾಕ್​ಡೌನ್, ನೈಟ್ ಕರ್ಫ್ಯೂ: ಸಿಎಂ ಪಳನಿಸ್ವಾಮಿ ಘೋಷಣೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಏಪ್ರಿಲ್ 20 ರಿಂದ ತಮಿಳುನಾಡಿನಲ್ಲಿ ಪ್ರತೀ ಭಾನುವಾರ ಲಾಕ್​ಡೌನ್ ಘೋಷಿಸಲಾಗಿದೆ. ಲಾಕ್​ಡೌನ್ ವೇಳೆ ಯಾವುದೇ ಶಾಪ್​ಗಳು, ಥಿಯೇಟರ್​ಗಳು, ಮಾಲ್​ಗಳು ಓಪನ್ ಇರುವಂತಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಇದರ ಜೊತೆಗೆ ನೈಟ್ ಕರ್ಫ್ಯೂ ಸಹ ಏಪ್ರಿಲ್ 20 ರಿಂದ ಪ್ರಾರಂಭವಾಗಲಿದ್ದು ರಾತ್ರಿ 10 ರಿಂದ ಮುಂಜಾನೆ 4 ರವರೆಗೂ ಜನರು, ಖಾಸಗಿ ವಾಹನಗಳು, ಆಟೋಗಳು, ಟ್ಯಾಕ್ಸಿಗಳು ಸಂಚರಿಸುವಂತಿಲ್ಲ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಣೆ ಹೊರಡಿಸಿದ್ದಾರೆ.
ಅಲ್ಲದೇ ಏಪ್ರಿಲ್ 20 ರಿಂದ ಎಲ್ಲ ಪಾರ್ಕ್​ಗಳು ಮತ್ತು ಬೀಚ್​ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಸಮ್ಮರ್ ಕ್ಯಾಂಪ್​ಗಳಿಗೂ ಸಹ ನಿಷೇಧ ಹೇರಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಕಾಳಜಿ ಹಿನ್ನೆಲೆ 12 ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ. ಪ್ರವಾಸಿ ತಾಣಗಳಾದ ನೀಲಗಿರೀಸ್, ಕೊಡೈಕೆನಾಲ್ ಮತ್ತು ಯೆರ್​ಕಾಡ್​ಗಳಿಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಲಾಕ್​ಡೌನ್ ಸಮಯದಲ್ಲಿ ಸ್ವಿಗ್ಗಿ, ಜೊಮ್ಯಾಟೋದಂಥ ಫುಡ್ ಡೆಲಿವರಿ ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಮೂರು ಹಂತಗಳಲ್ಲಿ ಅವಕಾಶ ನೀಡಲಾಗಿದ್ದು, ಬೆಳಗ್ಗೆ 10 ರಿಂದ ಬೆಳಗ್ಗೆ 10, ಮಧ್ಯಾಹ್ನ 12 ರಿಂದ ಸಂಜೆ 3 ಮತ್ತು ಸಂಜೆ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಈ ಕಂಪನಿಗಳು ಫುಡ್ ಡೆಲಿವರಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss