ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಸಚಿವರಾದ ಸುನೀಲ್ ಕುಮಾರ್, ಡಾ.ಅಶ್ವತ್ಥ್ ನಾರಾಯಣ್, ವಿ.ಸೋಮಣ್ಣ ಮತಯಾಚನೆ

ಹೊಸದಿಗಂತ ವರದಿ, ಮೈಸೂರು:

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೈ.ವಿ.ರವಿಶಂಕರ್ ಪರವಾಗಿ ಮಂಗಳವಾರ ಸಚಿವರುಗಳಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಸುನಿಲ್ ಕುಮಾರ್, ವಿ.ಸೋಮಣ್ಣ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.
ಸಚಿವ ಡಾ.ಅಶ್ವಥ್ ನಾರಾಯಣ್ ಅವರು, ಮೈಸೂರಿನ ಆರ್ಯುವೇದಿಕ್ ಮೆಡಿಕಲ್ ಕಾಲೇಜು, ಮೆಡಿಕಲ್ ಕಾಲೇಜ್, ಬಿಜಿಎಸ್ ಕಾಲೇಜ್, ಮಹಾರಾಜ, ಯುವರಾಜ ಕಾಲೇಜ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಮತದಾರರ ಬಳಿ ಪಕ್ಷದ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಅವರನ್ನು ಗೆಲ್ಲಿಸಿಕೊಡುವಂತೆ ಮತಯಾಚನೆ ಮಾಡಿ ಮನವಿ ಮಾಡಿದರು. ಬಳಿಕ ನಗರದ ಹೋಟೆಲ್ ಗ್ರೀನ್ ಹೆರಿಟೆಜ್ ಹೋಟೆಲ್‌ನಲ್ಲಿ ಅತಿಥಿ ಉಪನ್ಯಾಸಕರ ಜೊತೆ ಸಂವಾದ ನಡೆಸಿದರು.
ಅತಿಥಿ ಉಪನ್ಯಾಸಕರು ತಾವು ಶಾಲಾ-ಕಾಲೇಜುಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆ, ಎಳೆಯಾಗಿ ಸಚಿವರ ಮುಂದೆ ಬಿಡಿಸಿಟ್ಟರು. ಎಲ್ಲರ ನೋವುಗಳು, ಸಮಸ್ಯೆಗಳನ್ನು ಆಲಿಸಿದ ಸಚಿವರು, ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಮುಗಿದ ಬಳಿಕ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ನಗರ ವಕ್ತಾರ ಎಂ.ಎ.ಮೋಹನ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಹೇಮಾನಂದೀಶ್, ಅಭ್ಯರ್ಥಿ ಮೈ.ವಿ.ರವಿಶಂಕರ್, ಮುಖಂಡರಾದ ಎಸ್.ಜಯಪ್ರಕಾಶ್ (ಜೆಪಿ), ಶಿವಕುಮಾರ್, ಈ.ಸಿ.ನಿಂಗರಾಜೇಗೌಡ, ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.
ಸಭೆ ಬಳಿಕ ಸಚಿವರು ಸರಸ್ವತಿಪುರಂ ಹಾಗೂ ಕುವೆಂಪು ನಗರದಲ್ಲಿರುವ ಸೋಮಾನಿ ಕಾಲೇಜ್‌ಗೆ ಭೇಟಿ ನೀಡಿ, ಮತಯಾಚನೆ ಮಾಡುವರು. ಸಂಜೆ 6ಕ್ಕೆ ಕೆಬಿಎಲ್ ಆಲನಹಳ್ಳಿ ಲೇ ಔಟ್‌ನಲ್ಲಿರುವ ಕಾವೇರಿ ಕಾಲೇಜ್‌ಗೆ ಭೇಟಿ ಮಾಡಿ, ಮೈ.ವಿ.ರವಿಶಂಕರ್‌ಗೆ ಮೊದಲ ಪ್ರಾಶಸ್ಟ್ಯದ ಮತ ನೀಡಿ, ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಸಚಿವ ಸುನೀಲ್ ಕುಮಾರ್ ಮತಯಾಚನೆ;
ದಕ್ಷಿಣ ಪದವೀಧರ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾದ ರವಿಶಂಕರ್ ಪರವಾಗಿಮಾನ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ರವರು ನಗರದಲ್ಲಿರುವ ಕೆಪಿಟಿಸಿಎಲ್, ಚೆಸ್ಕಾಂ ಕಚೇರಿಗೆ ಭೇಟಿ ನೀಡಿ, ಮತದಾರರಲ್ಲಿ ಮತಯಾಚಿಸಿದರು.

ಹೆಬ್ಬಾಳ್‌ನಲ್ಲಿರುವ ಕೈಗಾರಿಕ ಪ್ರದೇಶದ ಸ್ಕ್ಯಾನ್‌ರೇ, ಗಂಗೋತ್ರಿ ಲೇಔಟ್‌ನಲ್ಲಿರುವ ಶ್ರೀಕೃಷ್ಣಧಾಮ, ಪ್ರೀತಿ ಲೇಔಟ್‌ನಲ್ಲಿ ವಿದುಷಿ ಕೃಪಾಫಡ್ಕೆ ಅವರ ಮನೆಗೆ ಭೇಟಿ ನೀಡಿ, ಕಳೆದ ಬಾರಿ ಅಲ್ಪ ಮತಗಳ ಅಂತರದಿoದ ಸೋತಿರುವ ಮೈ.ವಿ.ರವಿಶಂಕರ್ ಅವರಿಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಮೊದಲ ಸುತ್ತಿನಲ್ಲಿಯೇ ಭರ್ಜರಿ ಮತಗಳ ಅಂತರದಿoದ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು. ಈ ವೇಳೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿಯಾದ ದೇವನೂರು ಪ್ರತಾಪ್. ಮೈಸೂರು ನಗರ ಪಾಲಿಕೆ ಸದಸ್ಯರಾದ ರಮೇಶ್. ಜಗದೀಶ್. ಅರುಣ್‌ಕುಮಾರ್‌ಗೌಡ, ಸೋಮಶೇಖರ್ ಪರೀಕ್ಷಿತ್ ರಾಜ್ ಅರಸ್, ಶಂಭು ಪಟೇಲ್, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು

ಸಚಿವ ವಿ.ಸೋಮಣ್ಣ ಪ್ರಚಾರ; ವಸತಿ ಮತ್ತು ಮೂಲ ಅಭಿವೃದ್ಧಿ ಹಾಗೂ ಚಾಮರಾಜನಗರ ಉಸ್ತುವಾರಿ ಸಚಿವ ವಿ ಸೋಮಣ್ಣನವರು ಮೈಸೂರಿನ ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ ವಿ ರವಿಶಂಕರ್ ಪರವಾಗಿ ಮತಯಾಚಿಸಿದರು. ಈ ವೇಳೆ ಸಂಸ್ಥೆಯ ಕಾಲೇಜು ಪ್ರಾಂಶುಪಾಲ ಬಿ.ನೀಲಕಂಠ , ಮಂಗಳ ಮುದ್ದು ಮಾದಪ್ಪ, ಮಮತಾ, ಬಿಜೆಪಿ ಮುಖಂಡರುಗಳಾದ ಎಸ್‌ಎಂಪಿ ಶಿವಪ್ರಕಾಶ್, ಆರ್.ಪರಮೇಶ, ಯು,ಎಸ್. ಶೇಖರ್ ಮತ್ತಿತರರು ಹಾಜರಿದ್ದರು.

ನಂತರ ಸಚಿವರು ಮಧ್ಯಾಹ್ನ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರೊoದಿಗೆ ಮತದಾರರ ಸಭೆಯನ್ನು ನಡೆಸಿದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು, ಜಾರಿಗೊಳಿಸಿರುವ ಯೋಜನೆಗಳ ಕುರಿತು ಬಿ.ವೈ.ವಿಜಯೇಂದ್ರ ಮಾಹಿತಿ ನೀಡಿದರು. ಸಂಜೆ ಬಲ್ಲಾಳ್ ವೃತ್ತದಲ್ಲಿರುವ ನಿತ್ಯೋತ್ಸವ ಫಂಕ್ಷನ್ ಹಾಲ್‌ನಲ್ಲಿ ಸಚಿವ ವಿ.ಸೋಮಣ್ಣ ಚುನಾವಣಾ ಪ್ರಚಾರ ಸಭೆ ನಡೆಸಿ, ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಮತಯಾಚನೆ ಮಾಡಿದರು. ಮತ್ತೊಂದೆಡೆ ಬಿ.ವೈ.ವಿಜಯೇಂದ್ರ ಅವರು, ಹೋಟೆಲ್ ಸಂದೇಶ್ ಪ್ರಿನ್ಸ್ನಲ್ಲಿ ಶಿಕ್ಷಕರ ಸಭೆ ನಡೆಸಿ, ಮತಯಾಚನೆ ಮಾಡಿದರು. ಅವರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಮಾಧ್ಯಮ ಸಹ ವಕ್ತಾರ ಕೇಬಲ್ ಮಹೇಶ್ ಮತ್ತಿತರರು ಸಾಥ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!