ಐಪಿಎಲ್‌ ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ವಿದೇಶಿ ಸ್ಪಿನ್ನರ್‌ ಎಂಬ ದಾಖಲೆ ಬರೆದ ಸುನೀಲ್‌ ನರೈನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 150 ವಿಕೆಟ್‌ಗಳನ್ನು ಕಬಳಿಸಿದ ಮೊದಲ ವಿದೇಶಿ ಸ್ಪಿನ್ನರ್ ಆಗಿ ಸುನಿಲ್ ನರೈನ್ ಹೊರಹೊಮ್ಮಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಕದನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಟಾರ್‌ ಸ್ಪಿನ್ನರ್‌ ನರೈನ್ ಈ ಸಾಧನೆ ಬರೆದಿದ್ದಾರೆ.
ಸುನಿಲ್ ನರೈನ್ ಅವರು ತಮ್ಮ ಮೂರನೇ ಓವರ್‌ನಲ್ಲಿ ಲಲಿತ್ ಯಾದವ್ ರ ವಿಕೆಟ್ ಪಡೆಯುವ ಮೂಲಕ ಈ ಸಾಧನೆಯನ್ನು ಪೂರ್ಣಗೊಳಿಸಿದರು. ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಮೈಲಿಗಲ್ಲನ್ನು ತಲುಪಿದ ಒಂಬತ್ತನೇ ಬೌಲರ್ ಎಂಬ ಸಾಧನೆ ಬರೆದಿದ್ದಾರೆ. ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದ ಆರನೇ ಸ್ಪಿನ್ನರ್. 2011 ರಲ್ಲಿ ಕೆಕೆಆರ್‌ ಪರ ಆಡಿದ ತನ್ನ ಮೊದಲ ಋತುವಿನಲ್ಲೇ ನರೈನ್ 24 ವಿಕೆಟ್‌ಗಳೊಂದಿಗೆ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದರು. ಮುಂದಿನ 2 ಋತುಗಳಲ್ಲಿ, ಅವರು ಕ್ರಮವಾಗಿ 22 ಮತ್ತು 21 ವಿಕೆಟ್‌ಗಳನ್ನು ಪಡೆದಿದ್ದರು. 2021 ರಲ್ಲಿ ಕೆಕೆಆರ್‌ ರೀಟೇನ್‌ ಮಾಡಿತ್ತು. ಕಳೆದ ವರ್ಷ 16 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡವು ಫೈನಲ್‌ ಪ್ರವೇಶಿಸುವಲ್ಲಿ ನರೇನ್‌ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್‌ ನಲ್ಲಿ ಅತಿಹೆಚ್ಚು ವಿಕೆಟ್‌ ಗಳಿಸಿದವರ ಪಟ್ಟಿಯಲ್ಲಿ ಡ್ವೈನ್‌ ಬ್ರಾವೋ(171) ಮೊದಲ ಸ್ಥಾನದಲ್ಲಿದ್ದು, ಮಲಿಂಗಾ (170) ಎರಡನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!