ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಬ್ಯಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರೋ ಗಗನಯಾತ್ರಿಯಾದ ಸುನೀತಾ ವಿಲಿಯಮ್ಸ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸುನೀತಾ ವಿಲಿಯಮ್ಸ್ ಅವರ ದೇಹದ ಅಂಗಾಂಗದಲ್ಲೂ ಭಾರೀ ನೋವು ಕಾಣಿಸಿಕೊಂಡಿದ್ದು, ಸ್ನಾಯು ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಪರಿಣಾಮ ಭವಿಷ್ಯದಲ್ಲಿ ಸುನೀತಾ ವಿಲಿಯಮ್ಸ್ಗೆ ಮರೆವಿನ ಕಾಯಿಲೆ ಬರುವ ಭೀತಿ ಎದುರಾಗಿದೆ.
ಸುನೀತಾ ವಿಲಿಯಮ್ಸ್ ಭೂಮಿಯಿಂದ 150 ಮಿಲಿಯನ್ ಕಿಲೋ ಮೀಟರ್ ದೂರ ಇರೋ ಸೂರ್ಯನ ಬಳಿ ಇದ್ದಾರೆ. ಅಲ್ಲಿಂದ ಭೂಮಿಗೆ ಸೂರ್ಯನ ಕಿರಣಗಳು ಬರಲು 10 ನಿಮಿಷ ಬೇಕು. ಅದು ಮೇಲೆ ಬಿದ್ದರೆ ಮಾತ್ರ ಉಪಯುಕ್ತ. ಆದರೆ, ಸುನೀತಾ ವಿಲಿಯಮ್ಸ್ ಹತ್ತಿರದಲ್ಲೇ ಇದ್ದು, ಸೂರ್ಯನ ತಾಪಕ್ಕೆ ಒಳಗಾಗಿದ್ದಾರೆ.
ಅಲ್ಲಿ ಮೈಕ್ರೋ ಗ್ರ್ಯಾವಿಟಿ ಇದ್ದು, ರೇಡಿಯೇಷನ್ ಇರುತ್ತೆ. ಕ್ಯಾನ್ಸರ್ ನಾಶಕ್ಕಾಗಿ ಈ ರೇಡಿಯೇಷನ್ ಬಳಕೆಯಾಗುತ್ತದೆ. ಇಂತಹ ರೇಡಿಯೇಷನ್ ಮಧ್ಯೆ ಸುನೀತಾ ವಿಲಿಯಮ್ಸ್ ಬದುಕುತ್ತಿರೋದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಲ್ಲಿನವಾತಾವರಣದಿಂದ ಕಣ್ಣುಗಳಿಗೆ ತೊಂದರೆ ಆಗಿದೆ. ಮೆದುಳಿನ ಮೇಲೂ ಕೆಟ್ಟ ಪರಿಣಾಮ ಬೀರಿದ್ದು, ಯೋಚನಾ ಸಾಮರ್ಥ್ಯಕ್ಕೂ ಸಮಸ್ಯೆಯಾಗಿದೆ. ಬಾಹ್ಯಾಕಾಶದಲ್ಲಿ ತೇಲಿಕೊಂಡು ಇರೋ ಕಾರಣ ಮೂಳೆಗಳ ಸಮಸ್ಯೆ ಎದುರಾಗಿದೆ. 165 ದಿನಗಳಿಂದ ಆರೋಗ್ಯ ಹದಗೆಟ್ಟಿದೆ.
ಈಗಾಗಲೇ ಸುನೀತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಸ್ವತಃ ನಾಸಾ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅಗತ್ಯಕ್ಕಿಂತ ಹೆಚ್ಚಿನ ಕಾಲ ಅಲ್ಲೇ ವಾಸ ಮಾಡುತ್ತಿದ್ದು, ಇದರಿಂದಾಗಿ ಸುನೀತಾ ವಿಲಿಯಮ್ಸ್ ನಾಟಕೀಯ ರೀತಿಯಲ್ಲಿ ತೂಕ ಕಳೆದುಕೊಂಡಿದ್ದಾರೆ. ವಿಪರೀತವಾಗಿ ತೂಕನಷ್ಟ ಕಂಡು ಸಣಕಲು ಕಡ್ಡಿಯಾಗಿದ್ದಾರೆ. ಕೇವಲ ಎಂಟು ದಿನಕ್ಕಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ನೌಕೆಯಲ್ಲಿ ಆದ ಸಮಸ್ಯೆಯಿಂದಾಗಿ 160ಕ್ಕೂ ಹೆಚ್ಚು ದಿನಗಳ ಕಾಲ ಐಎಸ್ಎಸ್‌ನಲ್ಲಿ ವಾಸ ಮಾಡುವಂತಾಗಿದೆ.