ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಈ ಬಾರಿ ಬಿಗ್ಬಾಸ್ ಟಿವಿಯಲ್ಲಿ ಅಲ್ಲದೆ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಇದರ ಅರ್ಥ ಇಲ್ಲಿ ಸೆನ್ಸಾರ್ ಹಂಗಿಲ್ಲ.
ಇದೀಗ ಕಾರ್ಯಕ್ರಮಕ್ಕೆ ಸನ್ನಿ ಲಿಯೋನಿ ಕಾಲಿಟ್ಟಿದ್ದು, ವಿಚಿತ್ರವಾದ ಟಾಸ್ಕ್ಗಳನ್ನು ಸ್ಪರ್ಧಿಗಳಿಗೆ ನೀಡಲಾಗುತ್ತಿದೆ. ಬಿಗ್ಬಾಸ್ ಮನೆಯಲ್ಲಿ ಈಗಾಗಲೇ ಕೆಲವರು ಕ್ಲೋಸ್ ಆಗಿದ್ದಾರೆ. ಅವರ ಬಾಂಧವ್ಯ ಪರೀಕ್ಷಿಸಲು ಸನ್ನಿ ಟಾಸ್ಕ್ ಒಂದನ್ನು ನೀಡಿದ್ದಾರೆ. ಟಾಸ್ಕ್ ತುಂಬಾ ಬೋಲ್ಡ್ ಆಗಿದ್ದು, ಕಂಟೆಸ್ಟೆಂಟ್ಸ್ ನಾಚಿ ನೀರಾಗಿದ್ದಾರೆ.
ಕಪಲ್ ತಮ್ಮ ಮಧ್ಯದಲ್ಲಿ ತೆಂಗಿನಕಾಯಿಯೊಂದನ್ನು ಇಟ್ಟುಕೊಂಡು, ಕೈ ಬಳಸದೇ ಅದನ್ನು ಮುಖದವರೆಗೆ ತೆಗೆದುಕೊಂಡು ಬರಬೇಕಿದೆ. ಈ ಟಾಸ್ಕ್ ಮಾಡುತ್ತಿರುವವರ ಜೊತೆ, ಟಾಸ್ಕ್ ನೋಡುತ್ತಿರುವವರು ಕೂಡ ನಾಚಿಕೊಂಡಿದ್ದಾರೆ. ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಬೇಹಾ ಭಾಸಿನ್, ಪ್ರತೀಕ್ ಮುಂತಾದವರು ಟಾಸ್ಕ್ನಲ್ಲಿ ಭಾಗವಹಿಸಿದರು.