ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ಆನ್ಲೈನ್ ಡೆಸ್ಕ್:
ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿರುವ ಸನ್ರೈಸರ್ಸ್ ತಂಡವು ಟೀಮ್ ನ ನಾಯಕತ್ವವನ್ನೇ ಬದಲಾಯಿಸಿದೆ.
ಸ್ಫೋಟಕ ಆಟವನ್ನೇ ಮರೆತಿರುವ ಡೇವಿಡ್ ವಾರ್ನರ್ ನಾಯಕತ್ವದಿಂದ ವಜಾಗೊಂಡಿದ್ದು, ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ತಂಡದ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ.
ಉಳಿದ 8 ಲೀಗ್ ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವ ಹೊಣೆಯನ್ನು ವಿಲಿಯಮ್ಸನ್ ಹೊತ್ತುಕೊಂಡಿದ್ದು, ರಾಜಸ್ಥಾನ ವಿರುದ್ಧದ ಪಂದ್ಯದಿಂದಲೇ ಕೇನ್ ನಾಯಕತ್ವ ನಿಭಾಯಿಸಲಿದ್ದಾರೆ ಎಂದು ಸನ್ರೈಸರ್ಸ್ ಫ್ರಾಂಚೈಸಿ ತಿಳಿಸಿದೆ.
ತಂಡದ ವಿದೇಶಿ ಆಟಗಾರರ ಕಾಂಬಿನೇಷನ್ ಬದಲಾಯಿಸುವ ಸಲುವಾಗಿ ನಾಯಕತ್ವ ಬದಲಾವಣೆ ಮಾಡಲಾಗಿದೆ ಎಂದು ಸನ್ರೈಸರ್ಸ್ ತಿಳಿಸಿದೆ. ಇದರಿಂದ ವಾರ್ನರ್ ಆಡುವ 11ರ ಬಳಗದಿಂದಲೂ ಹೊರಬೀಳುವ ಸುಳಿವು ಬಿಟ್ಟುಕೊಟ್ಟಿದೆ. ಈ ಹಿಂದಿನ ಆವೃತ್ತಿಗಳಲ್ಲಿ ವಾರ್ನರ್ ಸಾರಥ್ಯದಲ್ಲೇ ತಂಡ ಉತ್ತಮ ಯಶಸ್ಸು ಕಂಡಿತ್ತು ಎಂಬುದನ್ನೂ ಫ್ರಾಂಚೈಸಿ ಒಪ್ಪಿಕೊಂಡಿದೆ. ಒಂದು ವೇಳೆ ವಾರ್ನರ್ ಹೊರಗುಳಿದರೆ ಇಂಗ್ಲೆಂಡ್ನ ಜೇಸನ್ ರಾಯ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.