spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಲೆಕ್ಟ್ರಿಕ್ ಸ್ಕೂಟರ್ ಆಯ್ತು, ಈಗ ಸೂಪರ್ ಬೈಕ್ ಉತ್ಪಾದನೆಯೂ ಕರ್ನಾಟಕದಲ್ಲೇ!

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿಗೆ ಸನಿಹದಲ್ಲೇ ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬೃಹತ್ ಕಾರ್ಖಾನೆ ತೆಗೆದಿರುವುದರಿಂದ ಕರ್ನಾಟಕ ಅಷ್ಟರಮಟ್ಟಿಗೆ ವಿದ್ಯುತ್ ಚಾಲಿತ ವಾಹನ ತಯಾರಿಕೆಯಲ್ಲಿ ಗುರುತಿಸಿಕೊಂಡಿದೆ. ಇನ್ನೂ ಹಲವು ವಿದ್ಯುತ್ ಸಾರಿಗೆ ಸಂಬಂಧದ ಕಾರ್ಖಾನೆಗಳು ಅದಾಗಲೇ ಕರ್ನಾಟಕದಲ್ಲಿ ತಮ್ಮ ಯೋಜನೆ ಹಾಕಿಕೊಂಡಿವೆ. 

ಈ ನಿಟ್ಟಿನಲ್ಲಿ ಒಂದು ಪ್ರಮುಖ ಸೇರ್ಪಡೆ ಅಲ್ಟ್ರಾವೈಯಲೆಟ್ ಅಟೊಮೆಟಿವ್ ಪ್ರೈವೇಟ್ ಲಿಮಿಟೆಡ್. ಬೆಂಗಳೂರಿನಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸುವುದಾಗಿ ಈ ನವೋದ್ದಿಮೆ ಬುಧವಾರ ಪ್ರಕಟಿಸಿದೆ. ವಿದ್ಯುತ್ ಚಾಲಿತ ವಾಹನ ಯುಗದ ಟ್ರೆಂಡ್ ರೂಪಿಸುವಲ್ಲಿ ಇದು ಕರ್ನಾಟಕದ ಪಾತ್ರವನ್ನು ಮತ್ತಷ್ಟು ಬಲಗೊಳಿಸಿದೆಯಲ್ಲದೇ ಸ್ಥಳೀಯರಿಗೆ ಉದ್ಯೋಗಾವಕಾಶದ ಬಾಗಿಲನ್ನೂ ತೆರೆಯಲಿದೆ.

ಓಲಾ ಸೇರಿದಂತೆ ಈಗ ಸದ್ದು ಮಾಡುತ್ತಿರುವ ಹೆಚ್ಚಿನ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊರತರುತ್ತಿವೆ. ಅಲ್ಟ್ರಾವೈಯಲೆಟ್ ಅಟೊಮೆಟಿವ್ ತೊಡಗಿಸಿಕೊಂಡಿರುವುದು ಎಲೆಕ್ಟ್ರಿಕ್ ಬೈಕ್ ತಯಾರಿಕೆಯಲ್ಲಿ. ಎಫ್ 77 ಎಂಬ ಉನ್ನತ ಸಾಮರ್ಥ್ಯದ ಬೈಕ್ ತಯಾರಿಕೆ ಕೆಲ ತಿಂಗಳಲ್ಲಿ ಶುರುವಾಗಲಿದ್ದು, ಮಾರ್ಚ್ 2022ರ ವೇಳೆಗೆ ಈ ಬೈಕ್ ಲಭ್ಯವಾಗುವ ನಿರೀಕ್ಷೆ ಇದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ 70,000 ಚದರ ಅಡಿಗಳಲ್ಲಿ ₹ 500 ಕೋಟಿ ಹೂಡಿಕೆಯಲ್ಲಿ ತಲೆಎತ್ತುತ್ತಿರುವ ಘಟಕವು ಮೊದಲ ವರ್ಷದಲ್ಲಿ 15,000 ಬೈಕುಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು ನಂತರ 1,20,000ಕ್ಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ. 

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಸೂಪರ್ ಬೈಕ್ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ನಾರಾಯಣ ಸುಬ್ರಮಣ್ಯಂ ಮತ್ತು ನೀರಜ್ ರಾಜಮೋಹನ್ ಹುಟ್ಟುಹಾಕಿದ ನವೋದ್ದಿಮೆ ಅಲ್ಟ್ರಾವೈಲೆಟ್ ಅಟೊಮೆಟಿವ್ ಪ್ರೈವೇಟ್ ಲಿಮಿಟೆಡ್.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss