Sunday, August 14, 2022

Latest Posts

ವಿದೇಶಗಳಿಗೆ ಕೊರೋನಾ ಲಸಿಕೆ ಪೂರೈಕೆ: ಭಾರತದ ಸೇವೆಗೆ ಕೆರಿಬಿಯನ್, ಆಫ್ರಿಕನ್​ ರಾಷ್ಟ್ರಗಳ ಬಹುಪರಾಕ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:
!
ವಿವಿಧ ರಾಷ್ಟ್ರಗಳಿಗೆ ಕೋವಿಡ್​ 19 ಲಸಿಕೆ ಪೂರೈಸುತ್ತಿರುವ ಭಾರತಕ್ಕೆ ಆಫ್ರಿಕನ್, ಕೆರಿಬಿಯನ್ ಮತ್ತು ಪೆಸಿಫಿಕ್ ರಾಷ್ಟ್ರಗಳ ಗುಂಪು ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಕ್ಯಾರಿಕೊಮ್ ರಾಷ್ಟ್ರಗಳ ಪರವಾಗಿ ಸೇಂಟ್ ಲೂಸಿಯಾ ಕೃತಜ್ಞತೆ ಸಲ್ಲಿಸಿದ್ದು, ಭಾರತವು ದಕ್ಷಿಣ ಆಫ್ರಿಕಾದವರಿಗೆ ಲಸಿಕೆ ಸರಬರಾಜು ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಕ್ಯಾರಿಕೊಮ್ ಕೆರಿಬಿಯನ್ ರಾಷ್ಟ್ರಗಳು ಗುಂಪಾಗಿದ್ದು, ಆಂಟಿಗುವಾ, ಬಾರ್ಬುಡಾ, ಬಹಾಮಾಸ್, ಬೆಲೀಜ್, ಗಯಾನಾ, ಜಮೈಕಾ, ಹೈಟಿ ಮತ್ತು ಸೇಂಟ್ ಲೂಸಿಯಾ ಸೇರಿವೆ.
ಸಂಕಷ್ಟದ ಸಮಯದಲ್ಲಿ ಅವರ ಔದಾರ್ಯ ಮತ್ತು ಐಕ್ಯತೆಗಾಗಿ ಭಾರತ ಸರ್ಕಾರಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಆಫ್ರಿಕನ್ ಒಕ್ಕೂಟದಿಂದ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿಯವರ ಔದಾರ್ಯತೆಯಿಂದಾಗಿ ಭಾರತ ಸರ್ಕಾರ ಬಾರ್ಬಡೋಸ್ ಮತ್ತು ಡೊಮಿನಿಕಾಗೆ 1,70,000 ಲಸಿಕೆಗಳನ್ನು ದ್ವಿಪಕ್ಷೀಯ ವ್ಯವಸ್ಥೆಗಳ ಮೂಲಕ ದಾನ ಮಾಡಿದೆ ಎಂದು ಸೇಂಟ್ ಲೂಸಿಯಾ ಹೇಳಿದೆ.
ಜಮೈಕಾ, ಎಸಿಪಿ (ಆಫ್ರಿಕನ್, ಕೆರಿಬಿಯನ್ ಮತ್ತು ಪೆಸಿಫಿಕ್) ರಾಷ್ಟ್ರಗಳಿಗೆ ಗುಂಪಿನ ಪರವಾಗಿ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ (ಎಲ್‌ಡಿಸಿ) ಲಸಿಕೆ ಸರಬರಾಜನ್ನು ತಲುಪಿಸುವಲ್ಲಿ ಭಾರತದ ಪ್ರಯತ್ನಗಳಿಗೆ ಅಭಿನಂದನೆ ಸಲ್ಲಿಸಿದೆ. ಈ ಬಿಕ್ಕಟ್ಟಿನಲ್ಲಿ ಲಸಿಕೆ ರಾಷ್ಟ್ರೀಯತೆಗೆ ಯಾವುದೇ ಸ್ಥಾನವಿಲ್ಲ. ಎಲ್ಲಾ ಸದಸ್ಯ ರಾಷ್ಟ್ರಗಳು ವೈರಸ್​ಗೆ​ ತುತ್ತಾಗಿವೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಎಲ್‌ಡಿಸಿಗಳಿಗೆ ಲಸಿಕೆಗಳನ್ನು ತಲುಪಿಸಲು ವ್ಯವಸ್ಥೆ ಮಾಡಿದ ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳ ಪ್ರಯತ್ನಗಳನ್ನು ಗೌರವಿಸುತ್ತೇವೆ ಎಂದು ಜಮೈಕಾ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss