ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ನಿರಾಸೆ ಮೂಡಿಸಿದ್ದು, ಇವರ ಬದಲಿಗೆ ಬೇರೆಯವರಿಗೆ ಚಾನ್ಸ್ ನೀಡಿ ಎಂದು ಗೌತಮ್ ಗಂಭೀರ್ ತಾಕೀತು ಮಾಡಿದ್ದಾರೆ.
ಫೆಬ್ರವರಿ-ಮಾರ್ಚ್‌ನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ಆಡಲಿದ್ದು, ಈ ಸರಣಿಯಲ್ಲಿ ಇವರಿಬ್ಬರಿಗೂ ಸ್ಥಾನ ಸಿಗೋದು ಬಹುತೇಕ ಅನುಮಾನವೇ ಆಗಿದೆ.
ರಹಾನೆ-ಪೂಜಾರ ಬದಲು ಹನುಮ ವಿಹಾರಿ ಹಾಗೂ ಶ್ರೇಯಸ್ ಅಯ್ಯರ್‌ಗೆ ಆದ್ಯತೆ ನೀಡಬೇಕು. ಅಜಿಂಕ್ಯ ಹಾಗೂ ರಹಾನೆ ನೀಡಿದ ರೀತಿ ಇವರಿಬ್ಬರಿಗೂ ಬೆಂಬಲ ನೀಡಬೇಕು, ಕನಿಷ್ಠ ಎರಡು ಮೂರು ಸರಣಿಗಳನ್ನು ಆಡಿಸಬೇಕು ಎಂದು ಗಂಭೀರ್ ಹೇಳಿದ್ದಾರೆ.
2018 ರಿಂದ ಭಾರತ ಟೆಸ್ಟ್ ತಂಡದಲ್ಲಿ ಹನುಮ ವಿಹಾರಿ ಇದ್ದಾರೆ. ಆದರೆ ಅವರು ಈವರೆಗೂ ಆಡಿರೋದು ಕೇವಲ 13 ಟೆಸ್ಟ್ ಪಂದ್ಯ ಮಾತ್ರ ಎಂದಿದ್ದಾರೆ.