Thursday, August 18, 2022

Latest Posts

ಸಿಪಿಎಂ ಮಾಜಿ ಲೋಕಲ್ ಕಾರ್ಯದರ್ಶಿ ಸಹಿತ ಬೆಂಬಲಿಗರು ಬಿಜೆಪಿಗೆ ಸೇರ್ಪಡೆ

ಹೊಸ ದಿಗಂತ ವರದಿ, ಕಾಸರಗೋಡು:

ಸಿಪಿಎಂ ಅಯಿರೂರ್ ನೋರ್ತ್ ಲೋಕಲ್ ಸಮಿತಿ ಮಾಜಿ ಕಾರ್ಯದರ್ಶಿ, ಪಂಚಾಯತ್ ಸದಸ್ಯರೂ ಆಗಿದ್ದ ಸುರೇಶ್ ಕುಯಿವೇಲಿ ಹಾಗೂ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಣಿಯಲ್ಲಿ ಬಿಜೆಪಿಯ ವಿಜಯ ಯಾತ್ರೆಗೆ ನೀಡಲಾದ ಸ್ವಾಗತ ಸಮಾರಂಭ ವೇದಿಕೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಂದ ಸದಸ್ಯತನ ಸ್ವೀಕರಿಸಿದರು.
ಸಿಪಿಎಂ ಇಡಪ್ಪಾಯೂರ್ ಲೋಕಲ್ ಸಮಿತಿ ಸದಸ್ಯ, ಬ್ರಾಂಚ್ ಕಾರ್ಯದರ್ಶಿ ಮೊದಲಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಜಿ.ಪ್ರಸನ್ನನ್ ನಾಯರ್ ಬಿಜೆಪಿಗೆ ಸೇರ್ಪಡೆಗೊಂಡರು. ಎಐಎಸ್‌ಎಫ್ ಮಾಜಿ ಜಿಲ್ಲಾ ಅಧ್ಯಕ್ಷ ಬಿನು ಮ್ಯಾಥ್ಯೂ, ಕರ್ಷಕ ಸಂಘ ನೇತಾರ ಟಿ.ಜೆ.ಜೋಸೆಫ್ ತಡಿತ್ತರಯಿಲ್ ಮೊದಲಾದವರು ರಾಣಿಯಲ್ಲಿ ನಡೆದ ಸಮ್ಮೇಳನ ವೇದಿಕೆಯಲ್ಲಿ ಪಕ್ಷದ ಸದಸ್ಯತನ ಸ್ವೀಕರಿಸಿದರು.
ಪೆರುನಾಡ್ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ , ಕೇರಳ ಕಾಂಗ್ರೆಸ್ ಎಂ. ನೇತಾರ ಜಿಜು ಶ್ರೀಧರ್, ಕಾಂಗ್ರೆಸ್ ಮಂಡಲ ಮಾಜಿ ಕಾರ್ಯದರ್ಶಿ ವರ್ಗೀಸ್ ಥೋಮಸ್ ಇಡಕ್ಕಡವಿಲ್ ಮುಂತಾದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪತ್ತನಂತ್ತಿಟ್ಟ ಜಿಲ್ಲೆಯಲ್ಲಿ ಪರ್ಯಟನೆ ನಡೆಸಿದ ವಿಜಯ ಯಾತ್ರೆಯು ತಿರುವಲ್ಲ , ರಾಣಿ, ಪತ್ತನಂತಿಟ್ಟ ಮೊದಲಾದ ಕಡೆಗಳಲ್ಲಿ ಸಂಚರಿಸಿತು. ಅಲ್ಲದೆ ವಿಜಯ ಯಾತ್ರೆಗೆ ಪಂದಳಂ, ಕೋಣಿ ಮುಂತಾದ ಕೇಂದ್ರಗಳಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!