ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್‌ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಕ್ತಾ ಕಪೂರ್‌ ಅವರ ಒಡೆತನದ ಒಟಿಟಿ ಪ್ಲಾಟ್‌ಫಾರಂ ಆಲ್ಟ್ ಬಾಲಾಜಿಯಲ್ಲಿ ಪ್ರದರ್ಶನಗೊಂಡ ವೆಬ್‌ ಸೀರೀಸ್‌ ‘ಗಿಗಿಗಿ’ನಲ್ಲಿರುವ ಆಕ್ಷೇಪಾರ್ಹ ವಿಷಯಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.
ಈ ವೆಬ್‌ ಸೀರೀಸ್‌ ಮೂಲಕ ಯೋಧರಿಗೆ ಅವಮಾನ ಮತ್ತು ಅವರ ಕುಟುಂಬಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಲ್ಲಿ ಏಕ್ತಾ ಕಪೂರ್‌ ವಿರುದ್ಧ ಇತ್ತೀಚೆಗೆ ಬಂಧನ ವಾರಂಟ್‌ ಜಾರಿಯಾಗಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.
ಇದೀಗ ಅವರ ಅರ್ಜಿ ಅವರಿಗೇ ತಿರುಗುಬಾಣವಾಗಿದ್ದು,ಇನ್ನು ಮುಂದೆ ಇಂಥ ಅರ್ಜಿಗಳನ್ನು ಸಲ್ಲಿಸಿದರೆ, ದಂಡ ವಿಧಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ.

ನೀವು ಇಂಥ ವೆಬ್‌ಸೀರೀಸ್‌ ಮೂಲಕ ಯುವಕರ ಮನಸ್ಸನ್ನು ಹಾಳು ಮಾಡುತ್ತಿದ್ದೀರಿ. ಪದೇ ಪದೆ ಇಲ್ಲಿಗೆ ಬರಲು, ಒಳ್ಳೆಯ ವಕೀಲರ ಸೇವೆ ಪಡೆಯಲು ನಿಮ್ಮಲ್ಲಿ ಸಾಕಷ್ಟು ಹಣ ಇರಬಹುದು. ಆದರೆ, ನಾವು ಇರುವುದು ಧ್ವನಿ ಇರುವವರ ಪರವಲ್ಲ, ಧ್ವನಿ ಇಲ್ಲದವರಿಗಾಗಿ ಕೆಲಸ ಮಾಡಲು. ಎಲ್ಲ ರೀತಿಯ ಸೌಲಭ್ಯವಿರುವಂಥ ಯೋಧರ ಕುಟುಂಬಗಳಿಗೇ ನ್ಯಾಯ ಸಿಗುವುದಿಲ್ಲ ಎಂದಾದರೆ, ಜನಸಾಮಾನ್ಯನ ಕಥೆಯೇನು’ ಎಂದೂ ನ್ಯಾಯಪೀಠ ಆಕ್ರೋಶಭರಿತವಾಗಿ ಪ್ರಶ್ನಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!