ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ನಿರಾಕರಿಸಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಬಿಸಿ ಮುಟ್ಟಿಸಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 25 ಸಂಸದರು ಏನು ಮಾಡುತ್ತಿದ್ದೀರಿ ರಾಜೀನಾಮೆ ಕೊಟ್ಟು ತೊಲಗಿ ಎಂದು ಆಗ್ರಹಿಸಿದೆ.
ರಾಜ್ಯದ ಜನತೆಯ ಜವಾಬ್ದಾರಿ ಇದ್ದಿದ್ದು – 25 ಸಂಸದರಿಗೆ ಜನತೆಯ ರಕ್ಷಣೆಯ ಹೊಣೆ ಇದ್ದಿದ್ದು – ರಾಜ್ಯ ಬಿಜೆಪಿ ಸರ್ಕಾರಕ್ಕೆ, ಕರ್ನಾಟಕದ ಮೇಲೆ ಆಕ್ಸಿಜನ್ ಯುದ್ಧ ಸಾರಿದ್ದ ಮೋದಿ ಸರ್ಕಾರದ ಯಾರೊಬ್ಬರೂ ಮಾತಾಡದೆ ಹೈಕೋರ್ಟ್, ಸುಪ್ರೀಂ ಕೋರ್ಟ್ಗಳು ನೆರವಿಗೆ ನಿಂತು, ಜನರ ಪರವಾಗಿ ಮಾತನಾಡುವ ಸ್ಥಿತಿ ಬಂದಿದ್ದು ಬಿಜೆಪಿ ಆಡಳಿತದ ಅಧೋಗತಿಗೆ ಸಾಕ್ಷಿ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.
ಕೇಂದ್ರ ಸರ್ಕಾರದ ಅನ್ಯಾಯದಿಂದ ರಾಜ್ಯದ ಜನತೆಯ ರಕ್ಷಣೆಗೆ ಹೈಕೋರ್ಟ್ ಬರಬೇಕಾಯ್ತು, ಸುಪ್ರೀಂ ಕೋರ್ಟ್ ಜೊತೆ ನಿಲ್ಲಬೇಕಾಯ್ತು. ನೆರೆ ಪರಿಹಾರದಿಂದ ಆಕ್ಸಿಜನ್ವರೆಗೂ ರಾಜ್ಯದ ಪರ ನಿಲ್ಲದ 25 ಸಂಸದರು ಅನಗತ್ಯ. ರಾಜೀನಾಮೆ ಕೊಟ್ಟು ಯಾವುದಾದರೂ ನೀರಿಲ್ಲದ ಬಾವಿ ನೋಡಿಕೊಳ್ಳಲಿ ಎಂದಿದೆ.
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಗುಡುಗಿರುವ ಕಾಂಗ್ರೆಸ್, ಎಲ್ಲಿದ್ಯಪ್ಪಾ.. ತೇಜಸ್ವಿ ಸೂರ್ಯ ಎಲ್ಲಿ ರೋಷ, ಆವೇಶ, ಆಕ್ರೋಶ, ಜನಪರ ಕಾಳಜಿ ಎಲ್ಲವೂ ಎಲ್ಲಿ ಹೋದವು? ಆಕ್ಸಿಜನ್ ನೀಡುವುದಿಲ್ಲವೆಂದು ಕರ್ನಾಟದ ವಿರುದ್ಧ ಸಮರ ಸಾರಿದ ಮೋದಿಯವರ ಬಗ್ಗೆ ಏಕೆ ತುಟಿ ಬಿಚ್ಚಲಿಲ್ಲ? ರಾಜ್ಯದ ಜನರ ಕಾಳಜಿ ವಹಿಸಲು ಕೋರ್ಟುಗಳೇ ಬರಬೇಕಾಯ್ತು, 25 ಸಂಸದರು ಎಲ್ಲಿ ಕಡಿದು ಗುಡ್ಡೆ ಹಾಕುತ್ತಿದ್ದಿರಿ? ಎಂದು ಪ್ರಶ್ನಿಸಿದೆ.