ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಾದ್ಯಂತ ಏರಿಕೆಯಾಗುತ್ತಿರುವ ಕೊರೋನಾ ಸೋಂಕಿನ ಜೊತೆಗೆ ಆಕ್ಸಿಜನ್ ಕೊರತೆಯೂ ಉಂಟಾಗಿದೆ. ಈ ಹಿನ್ನೆಲೆ ಆಕ್ಸಿಜನ್ ಹಂಚಿಕೆಯನ್ನ ಸುಗಮಗೊಳಿಸಲಿ ಸುಪ್ರೀಂಕೋರ್ಟ್ ಇಂದು ರಾಷ್ಟ್ರೀಯ ಟಾಸ್ಕ್ ಫೋರ್ಸ್ ಒಂದನ್ನು ರಚಿಸಿದೆ.
ಈ ಟಾಸ್ಕ್ಫೋರ್ಸ್ನಲ್ಲಿ ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿಯವರೂ ಕೂಡ ಸ್ಥಾನ ಪಡೆದಿದ್ದಾರೆ.
ಸುಪ್ರೀಂಕೋರ್ಟ್ ರಚಿಸಿರುವ ರಾಷ್ಟ್ರೀಯ ಟಾಸ್ಕ್ಫೋರ್ಸ್ನ ಸದಸ್ಯರ ಪಟ್ಟಿ ಹೀಗಿದೆ..
ಡಾ. ಭಬತೋಷ್ ಬಿಸ್ವಾಸ್, ವೆಸ್ಟ್ ಬೆಂಗಾಳ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್
ಡಾ. ದೇವೇಂದ್ರ ಸಿಂಗ್ ರಾಣಾ, ಸಿರ್ ಗಂಗಾರಾಮ್ ಹಾಸ್ಪಿಟಲ್
ಡಾ. ದೇವಿ ಪ್ರಸಾದ್ ಶೆಟ್ಟಿ, ನಾರಾಯಣ ಹೆಲ್ತ್ ಕೇರ್
ಡಾ. ಗಗನ್ ದೀಪ್ ಕಂಗ್, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್
ಡಾ. ಜೆ ವಿ ಪೀಟರ್, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್
ಡಾ. ನರೇಶ್ ಟ್ರೆಹೆನ್, ಮೇದಾಂತ್ ಹಾಸ್ಪಿಟಲ್
ಡಾ. ರಾಹುಲ್ ಪಂಡಿತ್, ಫೋರ್ಟಿಸ್ ಹಾಸ್ಪಿಟಲ್
ಡಾ. ಸೌಮಿತ್ರ ರಾವತ್, ಸಿರ್ ಗಂಗಾರಾಮ್ ಹಾಸ್ಪಿಟಲ್
ಡಾ. ಶಿವ್ ಕುಮಾರ್ ಸರಿನ್, ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸ್
ಡಾ. ಝರಿರ್ ಎಫ್ ಉದ್ವಾದಿಯಾ, ಹಿಂದೂಜಾ ಹಾಸ್ಪಿಟಲ್