ʻಸರ್ಕಾರು ವಾರಿ ಪಾಟʼ ಸಿನಿಮಾ ಸಾರಾಂಶದಂತಿದೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟ ಸಿನಿಮಾ ಮೇ 12 ರಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ದಿನದಿಂದಲೇ ಪಾಸಿಟಿವ್ ಟಾಕ್‌ನೊಂದಿಗೆ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಸಾಲ ತೆಗೆದುಕೊಂಡ ರೈತರು ಮರುಪಾವತಿ ಮಾಡಲು ಪಡುತ್ತಿರುವ ಪಾಡು. ಆತ್ಮಹತ್ಯೆ ವಿಚಾರಗಳನ್ನು ತೋರಿಸಿದ್ದಾರೆ. ಶ್ರೀಮಂತರು ತೆಗೆದುಕೊಂಡ ಸಾಲದ ಬಗ್ಗೆ ಮಾತನಾಡದೆ ಕೇವಲ ಬಡ ರೈತರನ್ನು ಗುರಿಯಾಗಿಸಿದ ಬ್ಯಾಂಕ್ ಗಳು ಮನೆ, ಹೊಲಗಳಿಗೆ ದಾಳಿ ಮಾಡುತ್ತಿದ್ದಾರೆ. ದೊಡ್ಡ ದೊಡ್ಡವರನ್ನು ಬಿಟ್ಟು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿವೆ. ಇದರಿಂದ ರೈತರ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ತೋರಿಸಿರುವ ಸಾರಾಂಶದಂತೆಯೇ ಇದೀಗ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ರೈತರ ಸಾಲ ವಸೂಲಾತಿ ಕೋರಿ ಬ್ಯಾಂಕ್‌ವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ, ಮೊದಲು ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಹಿಡಿಯಿರಿ ನಂತರ ರೈತರ ಕಡೆ ಹೋಗಿ. ಇಂತಹ ಅರ್ಜಿಗಳಿಂದ ರೈತರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ತೀರ್ಪು ನೀಡಿದರು. ಈ ತೀರ್ಪು ಎಲ್ಲೆಡೆ ವೈರಲ್‌ ಆಗಿದೆ.

ಈ ವಿಚಾರವನ್ನು ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದ್ದು, ನಮ್ಮ ಸರ್ಕಾರು ವಾರಿ ಪಾಟ ಸಿನಿಮಾದಲ್ಲೂ ಈ ವಿಚಾರವನ್ನು ತೋರಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಮೆಂಟ್‌ ಮಾಡುತ್ತಿರುವ ಮಹೇಶ್ ಅಭಿಮಾನಿಗಳು ಇದು ಸಿನಿಮಾ ಎಫೆಕ್ಟ್ ಎಂದು ರೀಟ್ವೀಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ಭಾರೀ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!