Sunday, April 18, 2021

Latest Posts

ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ‘ಸೂರರೈ ಪೋಟ್ರು’ ಸಿನಿಮಾ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಆಸ್ಕರ್ ಪ್ರಶಸ್ತಿಗೆ ಅರ್ಹರಾದ ಚಿತ್ರಗಳ ಪಟ್ಟಿಯಲ್ಲಿ ಸುಧಾ ಕೊಂಗರಾ ನಿರ್ದೇಶನದ ತಮಿಳು ಚಿತ್ರ ‘ಸೂರರೈ ಪೋಟ್ರು’ 93 ನೇ ಕಾಣಿಸಿಕೊಂಡಿದೆ.
ಈ ಕುರಿತು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ಮಾ ಹಿತಿ ಹಂಚಿಕೊಂಡಿದ್ದು, 366 ಚಿತ್ರಗಳಲ್ಲಿ ಸೂರ್ಯ ಅಭಿನಯದ ‘ಸೂರರೈ ಪೋಟ್ರು’ 2021 ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದುಕೊಂಡಿದೆ.
‘ದಿ ಕ್ರಿಸ್‌ಮಸ್ ಕ್ರಾನಿಕಲ್ಸ್ 2’, ‘ದಿ ಕ್ರೂಡ್ಸ್: ಎ ನ್ಯೂ ಏಜ್’, ‘ಡಾ 5 ಬ್ಲಡ್ಸ್’, ‘ಮುಲಾನ್’, ‘ಟೆನೆಟ್’, ‘ವಂಡರ್ ವುಮನ್ 1984’, ‘ದಿ ವೈಟ್ ಟೈಗರ್’ ಮೊದಲಾದ ಚಿತ್ರಗಳು ಈ ಪಟ್ಟಿಯಲ್ಲಿವೆ.
ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಬೆಸ್ಟ್ ಒರಿಜಿನಲ್ ಸ್ಕೋರ್ ವಿಭಾಗದಲ್ಲಿ ‘ಸೂರರೈ ಪೋಟ್ರು’ ಆಸ್ಕರ್ ಪಟ್ಟಿಗೆ ಸೇರ್ಪಡೆಯಾಗಿದೆ. ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಪರಿಗಣಿಸಲ್ಪಟ್ಟ ಏಕೈಕ ಭಾರತೀಯ ಚಿತ್ರ ಇದಾಗಿದೆ ಎಂದು ಹೇಳಲಾಗಿದೆ. ಇದು ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರವಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss