ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಇನ್ಮುಂದೆ ಪ್ರಧಾನಿ ನರೇಂದ್ರ ಮೋದಿಯವರ ಅಂಗಳದ ಉದ್ಯಾನವನದಲ್ಲಿ ಕೇರಳ ಬಾಲಕಿಯ ಸೀಬೆ ಗಿಡ ಹಣ್ಣು ಬಿಡಲಿದೆ.
ಹೌದು.. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪಂಡಲಂ ಊರಿನ ನಿವಾಸಿ ಜಯಲಕ್ಷ್ಮಿ ಎನ್ನುವ 10ನೇ ತರಗತಿಯ ಬಾಲಕಿ ಬೆಳೆಸಿದ ಸೀಬೆ ಗಿಡವನ್ನು ಮಲಯಾಳಂ ಚಿತ್ರನಟ, ರಾಜಕಾರಣಿ ಸುರೇಶ್ ಗೋಪಿ ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ಹಿಂದೆ ಜಯಲಕ್ಷ್ಮಿ ಆ ಗಿಡವನ್ನು ಸುರೇಶ್ ಗೋಪಿಯವರಿಗೆ ಉಡುಗೊರೆಯಾಗಿ ನೀಡಿದ್ದರಂತೆ.
ಸಾವಯವ ಕೃಷಿ ಕನಸು ಹೊತ್ತಿರುವ ಈ ಬಾಲಕಿ ಮನೆಯ ಮುಂದೆ ಸಾವಯವ ಉದ್ಯಾನವನ್ನೇ ನಿರ್ಮಿಸಿದ್ದಾಳೆ. ಈಕೆಗೆ ಇದೇ ಕಾರಣಕ್ಕೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಕೂಡ ಲಭಿಸಿದೆ.
ಈ ಹಿಂದೆ ಜಯಲಕ್ಷ್ಮಿ ಯುವ ಜನತೆ ಸಾವಯವ ಕೃಷಿಯತ್ತ ಬರುವಂತೆ ಪ್ರೋತ್ಸಾಹ ನೀಡಬೇಕೆಂದು ಮೋದಿಯವರಲ್ಲಿ ಕೋರಿ ಪತ್ರ ಬರೆದಿದ್ದಳು.
ಕನಸಿನಲ್ಲಿ ನಾನು ಬೆಳೆಸಿದ ಸೀಬೆ ಗಿಡ ಮೋದಿಯವರನ್ನು ತಲುಪುತ್ತದೆ ಎಂದು ಕೊಂಡಿರಲಿಲ್ಲ ಎಂದು ಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ.