ಅಭಿಮಾನಿಗಳಿಗೆ ಬರ್ತ್ ಡೇ ಟ್ರೀಟ್: ವಾಡಿವಾಸಲ್ ವಿಡಿಯೋದಲ್ಲಿ ʻಸೂರ್ಯʼನ ಕರಾಮತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳಿನ ಹೀರೋ ‘ಸೂರ್ಯ’ ಹೆಸರು ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಅತ್ಯುತ್ತಮ ನಟನಾಗಿ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ಸೂರ್ಯ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮನಿಗಳಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಲ್ಲದೇ ಸೂರ್ಯ ಕೂಡ ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಉಡುಗೊರೆಯಾಗಿ ಸದ್ಯ ಅವರು ನಟಿಸುತ್ತಿರುವ ‘ವಾಡಿವಾಸಲ್’ ಚಿತ್ರದ ಮೇಕಿಂಗ್‌ ವಿಡಿಯೋವನ್ನು ಸರ್ಪ್ರೈಸ್ ಗಿಫ್ಟಾಗಿ  ನೀಡಿದ್ದಾರೆ

ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ನಡೆಯುತ್ತಿರುವಾಗಲೇ ಚಿತ್ರತಂಡ ಈ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸೂರ್ಯ ಹೇಗೆ ಗೂಳಿಯನ್ನು ತಡೆದಿದ್ದಾನೆ ಎಂಬುದನ್ನು ಚಿತ್ರತಂಡ ತೋರಿಸಿದೆ. ಗೂಳಿ ಪಳಗಿಸುವ ತರಬೇತಿ ಪಡೆಯುತ್ತಿದ್ದ ಸೂರ್ಯ ಅವರಿಗೆ ತಿಳಿಯದಂತೆ ಚಿತ್ರತಂಡ ಈ ವಿಡಿಯೋ ಮಾಡಿದೆ. ಹುಟ್ಟುಹಬ್ಬದ ಪ್ರಯುಕ್ತ ಈ ಮೇಕಿಂಗ್ ವಿಡಿಯೋ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಚ್ಚರಿ ಮೂಡಿಸಿದೆ.

ಈ ಸಿನಿಮಾದಲ್ಲಿ ಸೂರ್ಯ ಮತ್ತೊಮ್ಮೆ ಪವರ್ ಫುಲ್ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಚಿತ್ರದ ಟೈಟಲ್ ಪೋಸ್ಟರ್ ನೋಡಿದರೆ ಈ ಚಿತ್ರ ಜಲ್ಲಿಕಟ್ಟು ಆಟದ ಹಿನ್ನೆಲೆಯಲ್ಲಿ ಬರುತ್ತಿರುವುದು ಸ್ಪಷ್ಟವಾಗಿದೆ. ವಿಲಕ್ಷಣ ಚಿತ್ರಗಳ ನಿರ್ದೇಶಕ ವೆಟ್ರಿಮಾರನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ತಮಿಳುನಾಡಿನಲ್ಲಿ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!