ಹೊಸ ದಿಗಂತ ವರದಿ, ಬಳ್ಳಾರಿ:
ಕರ್ನಾಟಕ ಹಾಗೂ ಆಂಧ್ರ ಗಡಿ ಗುರುತು ಸರ್ವೆ ಕಾರ್ಯ ಕಳೆದ 1869ರ ನಕ್ಷೆ ಆಧರಿಸಿ ಸರ್ವೆ ಆಫ್ ಇಂಡಿಯಾದವರು ಸರ್ವೆ
ನಡೆಸಿದ್ದು, ಇದು ಅವೈಜ್ಞಾನಿಕ ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಭಾವಿಗಳನ್ನು ರಕ್ಷಿಸುವ ಕೆಲಸ ಇದಾಗಿದೆ ಎಂದು ಗಣಿ ಉದ್ಯಮಿ ಟಪಾಲ್ ಆರೋಪಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳ ಈ ಕ್ರಮದಿಂದ ಕರ್ನಾಟಕದ 270 ಎಕರೆ ಪ್ರದೇಶ ನೆರೆಯ ಆಂದ್ರದ ಪಾಲಾಗಲಿದೆ. ಅಕ್ರಮ ಗಣಿಗಾರಿಕೆ ಹಾಗೂ ಗಡಿ ಧ್ವಂಸ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಅನೇಕ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಶೀಘ್ರದಲ್ಲೇ ಆಂದ್ರ ಹಾಗೂ ರಾಜ್ಯದ ಗಡಿ ಗುರುತು ಸರ್ವೆ ನಡೆಸಿ ಎಂದು ಖಡಕ್ ಸೂಚನೆ ನೀಡಿದ್ದರೂ ಇಲ್ಲಿವರೆಗೆ ಈ ಕಾರ್ಯ ಪೂರ್ಣಗೊಂಡಿಲ್ಲ, ಇದರಲ್ಲಿ ಭಾಗಿಯಾಗಿರುವ ಗಣ್ಯರನ್ನು ರಕ್ಷಿಸುವ ಹುನ್ನಾರ ನಡೆದಿದೆ. ಕೂಡಲೇ ರಾಜ್ಯ ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
1953 ರ ಪ್ರಕಾರ ಸರ್ವೆ ನಡೆಸಬೇಕು ಎಂದು ಸಾಕಷ್ಟು ಬಾರಿ ಸರ್ಕಾರದ ಗಮನಸೆಳೆದಿರುವೆ, ನ್ಯಾಯಾಲಯದಲ್ಲಿ ಮನವಿ ಮಾಡಿರುವೆ, ಆದರೂ, ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದೇ 1869ರ ನಕ್ಷೆ ಆಧರಿಸಿ ಸರ್ವೆ ಕಾರ್ಯ ನಡೆದಿದೆ. ಅದಕ್ಕೆ ಸರ್ಕಾರ ಒಪ್ಪಿಗೆ ಮುದ್ರೆ ಇನ್ನೂ ಹಾಕಿಲ್ಲ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ವೆ ಆಫ್ ಇಂಡಿಯಾದ ಅಧಿಕಾರಗಳು, ಓಬಳಾಪುರಂ ಕಂಪನಿ ಮಾಡಿರುವ ಅಕ್ರಮವನ್ನು ಮುಚ್ಚಲು ಸರ್ವೆ ನಡೆಸಲು ಮುಂದಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಗ್ರಾಮದ ಗಡಿ ಗುರುತುಗಳನ್ನು ದ್ವಂಸ ಮಾಡಿದ ಓಬಳಾಪುರಂ ಕಂಪನಿಯವರು,
ಬ್ರಿಟೀಷ್ ಅವರ ಕಾಲದಲ್ಲಿ ಗುರುತಿಸಿದ ಗಡಿಬರೇಖಯನ್ನೇ ಧ್ವಂಸ ಮಾಡಿದ್ದಾರೆ. ಕೇಂದ್ರದಲ್ಲಿ ರಾಜ್ಯದಲ್ಲಿ ಓಬಳಾಪುರಂ ಕಂಪನಿ ಅವರ ಮುಖ್ಯಸ್ಥರ ಸರ್ಕಾರವಿದೆ, ತರಾತುರಿ ಸರ್ವೆ ನಡೆಸಿ ಪ್ರಕರಣದಿಂದ ಪಾರಾಗುವ ಹುನ್ನಾರ ನಡೆದಿದೆ. ಗ್ರಾಮದ ಗಡಿ ಗುರುತುಗಳನ್ನು ಗುರುತಿಸಬೇಕು, ಅಂದಾಗ ಮಾತ್ರೆ ಅಕ್ರಮ ಹೊರ ಬಿಳಲಿದೆ, ಸರ್ಕಾರ ಆಸಕ್ತಿ ವಹಿಸಬೇಕು, ಈಗಾಗಲೇ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಯಲ್ಲಿದ್ದು, ಕಾನೂನು ಹೋರಾಟ ಮುಂದುವರೆಸುವೆ ಎಂದರು.