Friday, October 7, 2022

Latest Posts

ಲಂಚ ಪಡೆಯುತ್ತಿದ್ದ ಸರ್ವೇಯರ್ ರವಿಕುಮಾರ್ ಎಸಿಬಿ ಬಲೆಗೆ.!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ಯಾದಗಿರಿ:

ಇಂದು ಹುಣಸಗಿ ಪಟ್ಟಣದ ಕಕ್ಕೇರಿ ಕ್ರಾಸ್ ಹತ್ತಿರ ಸರ್ವೇಯರ್ ರವಿಕುಮಾರ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬನಹಟ್ಟಿ ಗ್ರಾಮದ ಮಹಾದೇವಪ್ಪ ಬಡಿಗೇರ್ ಎಂಬುವವರ ಹೊಲ ಸರ್ವೆ ನಂಬರ್ 53ರ 12 ಎಕರೆ ಭೂಮಿಯಲ್ಲಿ 4 ಎಕರೆ 30 ಗುಂಟೆ ಪ್ರತ್ಯೇಕ ಮಾಡಿ ಸರ್ವೆ ಮಾಡುವ ವಿಷಯದಲ್ಲಿ 2,50,000 ರೂಪಾಯಿ ಲಂಚದ ಹಣ ಪಡೆಯುತ್ತಿರುವಾಗ ಎಸಿಬಿ ಪೊಲೀಸ್ ಅಧಿಕ್ಷರಾದ ಮಹೇಶ್ ಮೇಘಣ್ಣವರ್ ಹಾಗೂ ಟೀಮ್ ಕೈಗೆ ಸಿಕ್ಕಿಬಿದ್ದಿದ್ದಾರೆ.
ಎಸಿಬಿ ಡಿವೈಎಸ್ಪಿ ಉಮಾ ಶಂಕರ್ ಯಾದಗಿರಿ, ಪಿ ಐ ಬಾಬಾಸಾಬ ಪಟೇಲ್, ಪಿಐ ಗುರುಪಾದ ಬಿರಾದಾರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಹುಣಸಗಿಯ ಸರ್ವೇಯರ್ ರವಿಕುಮಾರ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!