Wednesday, July 6, 2022

Latest Posts

ಸಾಮಾಜಿಕ ಅಂತರ ಕಾಯ್ದುಕೊಂಡೇ ಹೆಂಡ್ತಿಗೆ ಮುತ್ತು ಕೊಟ್ಟ ಸೂರ್ಯಕುಮಾರ್​!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………………………. 

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮುಂಬೈ ಇಂಡಿಯನ್ಸ್ ಆಟಗಾರ ಸೂರ್ಯ ಕುಮಾರ್ ಯಾದವ್ ಅವರು ಪತ್ನಿ ದೇವಿಶಾ ಶೆಟ್ಟಿಗೆ ಅಂತರ ಕಾಯ್ದುಕೊಂಡೇ ಮುತ್ತು ಕೊಡುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.
ನವದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಮುಂಬೈ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್​​ ಗೆಲುವಿನ ಲಯಕ್ಕೆ ಮರಳಿದೆ. ಇದೇ ಖುಷಿಯಲ್ಲಿ ಸೂರ್ಯಕುಮಾರ್ ಯಾದವ್​ ತಮ್ಮ ಪತ್ನಿ ದೇವಿಶಾ ಶೆಟ್ಟಿಗೆ ಮುತ್ತಿಕ್ಕಿದ್ದಾರೆ. ವಿಶೇಷವೆಂದರೆ ದೇವಿಶಾ ಸ್ಟೇಡಿಯಂನ ಗ್ಲಾಸ್​ ಹಿಂಬದಿಯಲ್ಲಿದ್ದು, ಮೈದಾನದಲ್ಲಿದ್ದ ಸೂರ್ಯಕುಮಾರ್​ ತಮ್ಮ ಪತ್ನಿಗೆ ಚುಂಬಿಸಿದ್ದಾರೆ. ಗ್ಲಾಸ್​ನ ಒಂದು ಬದಿಯಲ್ಲಿ ಪತ್ನಿ ಹಾಗೂ ಮತ್ತೊಂದು ಬದಿಯಲ್ಲಿ ಸೂರ್ಯಕುಮಾರ್​ ಇರುವುದು ವಿಶೇಷವಾಗಿದೆ.
ಇಲ್ಲಿ ಐಪಿಎಲ್​ನ ಯಾವುದೇ ಬಯೋಬಬಲ್​ ಉಲ್ಲಂಘನೆಯಾಗಿಲ್ಲ ಎಂದು ಮುಂಬೈ ಇಂಡಿಯನ್ಸ್​​ ಕ್ರಿಕೆಟ್​ನ ನಿರ್ದೇಶಕಿ ಸಾಗರಿಕಾ ಘಾಟ್ಕೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss