Sunday, June 26, 2022

Latest Posts

ಸೂರ್ಯಕುಮಾರ್ ಯಾದವ್​ ಆಕರ್ಷಕ ಅರ್ಧಶತಕ: ಶ್ರೀಲಂಕಾಕ್ಕೆ 165 ರನ್​ಗಳ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸೂರ್ಯಕುಮಾರ್ ಯಾದವ್​ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ತಂಡಕ್ಕೆ 165ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್​ ಸೋತು ಬ್ಯಾಟಿಂಗ್​ ಇಳಿದ ಭಾರತ ತಂಡ ಖಾತೆ ತೆರೆಯುವ ಮುನ್ನವೇ ಪದಾರ್ಪಣೆ ಬ್ಯಾಟ್ಸ್​ಮನ್ ಪೃಥ್ವಿ ಶಾ(0) ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು.
ಎರಡನೇ ವಿಕೆಟ್​ಗೆ ನಾಯಕ ಶಿಖರ್ ಧವನ್​ ಮತ್ತು ಸಂಜು ಸಾಮ್ಸನ್​ ಜೊತೆಗೂಡಿ 51 ರನ್​ ಸೇರಿಸಿ ಚೇತರಿಕೆ ನೀಡಿದರು. ಸಾಮ್ಸನ್​ ಹಸರಂಗ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಅವರು 20 ಎಸತಗಳಲ್ಲಿ 27ರನ್​ಗಳಿಸಿದ್ದರು.
ನಂತರ ಬಂದ ಸೂರ್ಯಕುಮಾರ್​ ಯಾದವ್​ , ಧವನ್​ ಜೊತೆಗೂಡಿ 62 ರನ್​ ಸೇರಿಸಿದರು. ಶಿಖರ್ ಧವನ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ 46, ಸೂರ್ಯಕುಮಾರ್ ಯಾದವ್​ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್​ಗಳ ಸಹಿತ 50 ರನ್​ಗಳಿಸಿದರು.
ಹಾರ್ದಿಕ್​ ಪಾಂಡ್ಯ 12 ಎಸೆತಗಳಲ್ಲಿ 10 ರನ್​ಗಳಿಸಿ ಮತ್ತೊಮ್ಮೆ ವಿಫಲರಾದರು. ಇಶಾನ್​ ಕಿಶನ್ 14 ಎಸೆತಗಳಲ್ಲಿ ಅಜೇಯ 20 ರನ್​ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಲ್ಲದೆ 164 ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss