ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಇಂದು ತಮಿಳು ನಟ ಸೂರ್ಯ ಆಗಮಿಸಿದ್ದು, ಕಂಬನಿ ಮಿಡಿದಿದ್ದಾರೆ.
ತಮಿಳು, ತೆಲುಗು ಸಿನಿಮಾ ರಂಗಕ್ಕೂ ರಾಜ್ ಕುಟುಂಬ ಆಪ್ತವಾಗಿದ್ದು, ನಟರು ಪ್ರತಿದಿನವೂ ಸಮಾಧಿಗೆ ಭೇಟಿ ನೀಡಿ, ನಮಿಸುತ್ತಿದ್ದಾರೆ.
ಪುನೀತ್ ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯವಿತ್ತು. ಅವರ ಈ ರೀತಿ ನಮ್ಮನ್ನು ಬಿಟ್ಟು ಹೋಗಿದ್ದು ನ್ಯಾಯವಲ್ಲ. ಅವರಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಪುನೀತ್ ಯಾವಾಗಲೂ ಹಸನ್ಮುಖಿ, ಅವರ ನಗುವನ್ನು ಮಿಸ್ ಮಾಡುತ್ತೇನೆ.ಅವರನ್ನು ನೆನೆಸಿಕೊಂಡಾಗೆಲ್ಲ ನನ್ನ ಮುಖದಲ್ಲಿ ನಗು ಇದ್ದೇ ಇರುತ್ತದೆ. ಅಜಾತಶತ್ರು ಪುನೀತ್ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದಿದ್ದಾರೆ.
- Advertisement -