ಸೂರ್ಯಕುಮಾರ್- ವೆಂಕಟೇಶ್​ ಅಬ್ಬರ: ವೆಸ್ಟ್​ ಇಂಡೀಸ್​ಗೆ 185 ರನ್​ಗಳ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂರ್ಯಕುಮಾರ್ ಯಾದವ್​ ಮತ್ತು ವೆಂಕಟೇಶ್​ ಅಬ್ಬರ ಅವರ ಅಬ್ಬರದ ಬ್ಯಾಟಿಂಗ್ ನಿಂದ ಭಾರತ ವೆಸ್ಟ್​ ಇಂಡೀಸ್​ಗೆ 185 ರನ್​ಗಳ ಗುರಿ ನೀಡಿದೆ.
ಟಾಸ್​ ಸೋತು ಬ್ಯಾಟಿಂಗ್​ ಇಳಿದಿದ್ದ ಭಾರತ ತಂಡ ಪರ ಸೂರ್ಯಕುಮಾರ್ ಯಾದವ್​ 31 ಎಸೆತಗಳಲ್ಲಿ 1 ಬೌಂಡರಿ ಮತ್ತು 7 ಸಿಕ್ಸರ್​ಗಳ ಸಹಿತ 65 ರನ್​ಗಳಿಸಿದರೆ,
ವೆಂಕಟೇಶ್ ಅಯ್ಯರ್​ 19 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 35 ರನ್​ಗಳಿಸಿದರು.
ಇಶಾನ್ ಕಿಶನ್​ 31 ಎಸೆತಗಳಲ್ಲಿ 34 ರನ್​ , ರುತುರಾಜ್ 4 ರನ್​ಗಳಿಗೆ ವಿಕೆಟ್ ಒಪ್ಪಿಸಿ ವೈಫಲ್ಯ ಅನುಭವಿಸಿದರು.ಶ್ರೇಯಸ್​ ಅಯ್ಯರ್​ 25, ರೋಹಿತ್ ಶರ್ಮಾ 7 ರನ್​ಗಳಿಸಿ ಔಟಾದರು.
ವಿಂಡೀಸ್ ಪರ ಜೇಸನ್​ ಹೋಲ್ಡರ್​, ರಾಸ್ಟನ್ ಚೇಸ್​, ಡೊಮೆನಿಕ್ ಡ್ರೇಕ್ಸ್​ ಹೇಡನ್​ ವಾಲ್ಶ್​ ಮತ್ತು ರೊಮಾರಿಯೋ ಶೆಫರ್ಡ್​ ತಲಾ ಒಂದು ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!