ಸೂರ್ಯಕುಮಾರ್ ಯಾದವ್​ ಅರ್ಧ ಶತಕ: ವೆಸ್ಟ್​ ಇಂಡೀಸ್ ಗೆ 234 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್

ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯಲ್ಲಿ ಭಾರತ ತಂಡ ಗೆಲುವಿಗೆ 234 ರನ್​ಗಳ ಸಾಧಾರಣ ಗುರಿ ನೀಡಿದೆ.
ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ(5), ರಿಷಭ್​ಪಂತ್ (18) ಮತ್ತು ವಿರಾಟ್​ ಕೊಹ್ಲಿ(18) ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.
ಕೆಎಲ್ ರಾಹುಲ್​ ಮತ್ತು ಸೂರ್ಯಕುಮಾರ್ ಯಾದವ್​ 4ನೇ ವಿಕೆಟ್ ಜೊತೆಯಾಟದಲ್ಲಿ 91 ರನ್​ಗಳ ಜೊತೆಯಾಟ ನೀಡಿದರು. 48 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 49 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ 2 ರನ್​ ಕದಿಯುವ ಯತ್ನದಲ್ಲಿ​ ರನ್​ಔಟ್​ ಆದರು.ಸೂರ್ಯಕುಮಾರ್ ಯಾದವ್​ 83 ಎಸೆತಗಳಲ್ಲಿ 5 ಬೌಂಡರಿ ಸಹಿತ 64, ವಾಷಿಂಗ್ಟನ್​ ಸುಂದರ್​ 41 ಎಸೆತಗಳಲ್ಲಿ 24 , ದೀಪಕ್​ ಹೂಡ 25 ಎಸೆತಗಳಲ್ಲಿ 29, ಚಹಲ್​ ಅಜೇಯ 11 ರನ್​ಗಳಿಸಿದರು.
ವಿಂಡೀಸ್​ ಪರ ಅಲ್ಜಾರಿ ಜೋಶಫ್ 36ಕ್ಕೆ2, ಒಡೆನ್ ಸ್ಮಿತ್ 29ಕ್ಕೆ 2, ಕೆಮರ್​ ರೋಚ್​, ಅಲೆನ್​, ಹೋಲ್ಡರ್​ ಮತ್ತು ಹೊಸೇನ್​ ತಲಾ ಒಂದು ವಿಕೆಟ್​ ಪಡೆದು ಭಾರತವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!