ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಕಾರಣದಿಂದ ಕೇಂದ್ರಬಿಂದುವಾಗಿದ್ದ ಸುಶಾಂತ್ ಫ್ಲಾಟ್ ಇದೀಗ ಖಾಲಿಯಾಗಿದೆ. ಸುಶಾಂತ್ ಈ ಫ್ಲಾಟ್ನ ಎರಡು ಮಹಡಿಯನ್ನು ಬಾಡಿಗೆ ಪಡೆದಿದ್ದರು. ಇದೀಗ ಮನೆಯವರು ಫ್ಲಾಟ್ ಖಾಲಿ ಮಾಡಿದ್ದು, ಹೊಸಬರಿಗೆ ಬಾಡಿಗೆಗಾಗಿ ಮನೆ ಖಾಲಿ ಇದೆ.
ಸುಶಾಂತ್ ಇ ಎರಡು ಮನೆಗಳಿಗೆ ನಾಲ್ಕೂವರೆ ಲಕ್ಷ ಬಾಡಿಗೆ ಕಟ್ಟುತ್ತಿದ್ದರು. ಇದೀಗ ಲಾಕ್ಡೌನ್ ಕಾರಣದಿಂದ ಮನೆಯನ್ನು ನಾಲ್ಕು ಲಕ್ಷ ರೂ ಗೆ ಬಾಡಿಗೆಗೆ ಬಿಡಲಾಗಿದೆ.
ಸುಶಾಂತ್ ಇದ್ದಾಗ, ಅವರ ಸ್ನೇಹಿತರು, ಗೆಳತಿ ರಿಯಾ ಕೂಡ ಆಗಾಗ ಬಂದು ಉಳಿಯುತ್ತಿದ್ದರು. ಮನೆಯ ತುಂಬಾ ಆಂಟಿಕ್ ಐಟಮ್ಸ್ ಇಟ್ಟುಕೊಂಡಿದ್ದ ಸುಶಾಂತ್ ತಮ್ಮ ಮನೆಯನ್ನು ಬಹಳ ಇಷ್ಟಪಡುತ್ತಿದ್ದರು.ತಮ್ಮ ಮನೆ ಹೇಗಿದೆ, ಅದರಲ್ಲಿ ಏನೆಲ್ಲ ಇದೆ ಎಂದು ಸುಶಾಂತ್ ವಿಡಿಯೋ ಕೂಡ ಮಾಡಿದ್ದರು.