ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತೀಯ ಮೂಲದ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ಅಮೆರಿಕದಲ್ಲಿ ನಡೆದಿದೆ. ಶುಕ್ರವಾರ ಬೆಳಕಿಗೆ ಬಂದಿದೆ.
ಮೃತರು ಬಾಲಾಜಿ ಭಾರತ್ ರುದ್ರಾವರ್ (32), ಮತ್ತು ಆತನ ಗರ್ಭಿಣಿ ಪತ್ನಿ ಆರತಿ ಬಾಲಾಜಿ ರುದ್ರಾವರ್. ನಾರ್ಥ್ ಅರ್ಲಿಂಗ್ಟನ್ ಅಪಾರ್ಟ್ಮೆಂಟ್ನಲ್ಲಿ ದಂಪತಿಯ ಮೃತದೇಹ ಚಾಕು ಇರಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮನೆಯ ಬಾಲ್ಕನಿಯಲ್ಲಿ 4 ವರ್ಷದ ಮಗಳು ಜೋರಾಗಿ ಅಳುತ್ತಿರುವುದನ್ನು ಕೇಳಿದ ನೆರೆಹೊರೆಯವರು ಮನೆಯೊಳಗೆ ಹೋಗಿದ್ದಾರೆ. ಅಲ್ಲಿ ಲಿವಿಂಗ್ ರೂಮ್ನಲ್ಲಿ ದಂಪತಿ ಚಾಕು ಇರಿದ ಸ್ಥಿತಿಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖಾಧಿಕಾರಿಗಳು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಬಾಲಾಜಿ ರುದ್ರಾವರ್ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈ ನಿವಾಸಿ. ಐಟಿ ವೃತ್ತಿಪರನಾಗಿರುವ ಅವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. 2015ರಿಂದ ಹೆಂಡತಿ ಜೊತೆ ಅಮೆರಿಕದಲ್ಲಿಯೇ ವಾಸವಿದ್ದರು.