spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೆಂಪುಕೋಟೆ ಬಳಿ ಶಂಕಿತ ಡ್ರೋನ್ ಹಾರಾಟ : ಡ್ರೋನ್ ವಶಕ್ಕೆ ಪಡೆದ ಪೊಲೀಸರು

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ಮೋದಿ ಭಾಷಣಕ್ಕೆ ವೇದಿಕೆಯಾಗಲಿರುವ ಕೆಂಪುಕೋಟೆ ಬಳಿ ಶಂಕಿತ ಡ್ರೋನ್ ಪತ್ತೆಯಾಗಿದೆ.
ಡ್ರೋನ್ ಕಂಡ ಕ್ಷಣವೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ಡ್ರೋನ್‌ನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಕೆಂಪುಕೋಟೆ ಹಿಂಭಾಗವಾದ ವಿಜಯ ಘಾಟ್ ಬಳಿ ಡ್ರೋನ್ ಹಾರಾಡುತ್ತಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಜಯ ಘಾಟ್‌ನಲ್ಲಿ ವೆಬ್ ಸೀರಿಸ್ ಒಂದರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಡ್ರೋನ್ ಹಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಜಾಗ್ವಾರ್ ಹೆದ್ದಾರಿ ಗಸ್ತು ತಂಡ ಈ ಪ್ರದೇಶದಲ್ಲಿ ಗಸ್ತು ತಿರುಗುವಾಗ ಡ್ರೋನ್ ಹಾರಾಟ ಕಂಡಿದೆ. ಆ.15ರಂದು ಪ್ರಧಾನಿ ಮೋದಿ ಅವರ ಭಾಷಣ ಹಿನ್ನೆಲೆ ಕೆಂಪುಕೋಟೆ ಸುತ್ತಮುತ್ತ ನಿರ್ಬಂಧ ಹೇರಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಈ ಭಾಗದಲ್ಲಿ ಡ್ರೋನ್, ಹಾಟ್ ಏರ್ ಬಲೂನ್ ಹಾಗೂ ಪ್ಯಾರಾಗ್ಲೈಡಿಂಗ್ ನಿಷೇಧಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss