ದಿಗಂತ ವರದಿ, ಮುಂಡಗೋಡ:
ತಾಲೂಕಿನ ಹನುಮಾಪುರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಬ್ರಿಜ್ ಹತ್ತಿರದ ಹಳ್ಳದಲ್ಲಿ ಪಟ್ಟಣದ ನೆಹರುನಗರ ನಿವಾಸಿ ಮೆಹಬೂಬಸಾಬ ಜಮಖಂಡಿ(45) ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.
ಹನುಮಾಪುರ ಬ್ರಿಜ್ ಹತ್ತಿರದ ಹಳ್ಳದಲ್ಲಿ ಬುಲೆಟ್ ಬೈಕ್ ಸಮೇತ ಮೃತಪಟ್ಟಿರುವ ಸ್ಥಿತಿಯಲ್ಲಿ ಶುಕ್ರವಾರ ಮೃತದೇಹ ಪತ್ತೆಯಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಪರಿಶೀಲಿಸಿದ್ದಾರೆ. ಅಪಘಾತವೋ? ಕೊಲೆಯೋ? ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಮೃತಪಟ್ಟಿರುವ ಮೆಹಬೂಬಸಾಬ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಕೆಳಗಡೆ ಇರುವ ಮಳಿಗೆಯಲ್ಲಿ ‘ಜಮಖಂಡಿ ಮೆಟಲ್ ಸ್ಟೋರ್’ ಅಂಗಡಿ ಇಟ್ಟುಕೊಂಡಿದ್ದ. ಆದರೆ, ಮೀಟರ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ ಸ್ಥಳಕ್ಕೆ ಸಿ.ಪಿ.ಐ ಸಿದ್ದಪ್ಪ ಸಿಮಾನಿ, ಪಿ.ಎಸ್.ಐ ಬಸವರಾಜ್ ಮಬನೂರ, ಎನ್ ಜಕ್ಕಣ್ಣನವರ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.