ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಉಪನ್ಯಾಸರಿಗೆ ʼಸ್ವರಾಜ್ಯ- 75ʼ ಕಾರ್ಯಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಜ್ಯ ಉತ್ತರ ಪ್ರಾಂತವು ಉಪನ್ಯಾಸಕರಿಗೆ ಆಯೋಜಿಸಿದ್ದ ʼಸ್ವರಾಜ್ಯ- 75 ಕಾರ್ಯಕ್ರಮʼ ಹಾಗೂ ʼಉತ್ತರ ಪ್ರಾಂತ ಬೈಠಕ್ʼ ಬೀದರ್ ನಗರದ ವಿದ್ಯಾರಣ್ಯ ಪ್ರೌಢಶಾಲೆಯ ಅವರಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ 56 ಉಪನ್ಯಾಸಕರು ಮತ್ತು ಸಮಿತಿಯ 15 ಕಾರ್ಯಕರ್ತರು ಉಪಸ್ಥಿತರಿದ್ದರು. ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಸಂಪರ್ಕ ಪ್ರಮುಖರಾದ ಡಾ. ಹೇಮಂತ್ ಮಜುಂದಾರ್ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಸಮಿತಿಯ ಮಹಿಳಾ ಪ್ರಮುಖ್ ಡಾ. ಅನುರಾಧ ರಾಜಹಂಸ ಅವರು ಇತಿಹಾಸ ಸಂಕಲನದಲ್ಲಿ ಮಹಿಳೆಯರ ಸಾಧನೆ, ಜವಾಬ್ದಾರಿಗಳ ಕುರಿತಾಗಿ ವಿಚಾರಗಳನ್ನು ಹಂಚಿಕೊಂಡರು. ಭಾಇಸಂಸ ಉಪಾಧ್ಯಕ್ಷರಾದ ಶ್ರೀಶೈಲ ಬಿರಾದಾರ್ ದಿಕ್ಸೂಚಿ ಭಾಷಣ ಮಾಡಿದರು. ಸಮಿತಿಯ ರಾಜ್ಯ ಉತ್ತರ ಪ್ರಾಂತ ಸಂಚಾಲಕರ ಡಾ. ಶಿವಕುಮಾರ್ ಉಪೆ‌ ಮಾತನಾಡಿ, ಅಧ್ಯಯನ ಮತ್ತು ಸಂಶೋಧನೆಯಿಂದ ನೈಜ ಇತಿಹಾಸವನ್ನು ಬೆಳಕಿಗೆ ತರುವಲ್ಲಿ ಉಪನ್ಯಾಸಕರು ವಹಿಸಬೇಕಾದ ಪಾತ್ರಗಳ ಬಗ್ಗೆ ವಿವರಿಸಿದರು. ಸಮಿತಿಯ ಧಾರವಾಡ ಜಿಲ್ಲಾ ಸಂಚಾಲಕರ ಡಾ. ಬಸವರಾಜ ಅಕ್ಕಿ, ಕಲಬುರ್ಗಿ ವಿವಿ ಸಿಂಡಿಕೇಟ್ ಸದಸ್ಯರಾದ ಪ್ರತಿಭಾ ಚಾಮ, ವಿವಿಯ ಕೌನ್ಸೆಲಿಂಗ್ ಸದಸ್ಯ ಯೋಗೀಶ್, ಮಹಿಳಾ ವಿವಿ ಸಿಂಡಿಕೇಟ್ ಸದಸ್ಯ ಡಿ ಬಿ ಕಂಬಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಬೌದ್ಧಿಕ್ ಪ್ರಮುಖರಾದ ಹನುಮಂತರಾವ್ ಪಾಟೀಲ್ ಅವರು ಉಪಸ್ಥಿತರಿದ್ದರು.
ಬೈಠಕ್ ನಲ್ಲಿ ಧಾರವಾಡ, ಬಳ್ಳಾರಿ, ರಾಯಚೂರು, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳ ಸಮಿತಿ ಸದಸ್ಯರ ಹಾಗೂ ಕಾರ್ಯಕರ್ತರ ಘೋಷಣೆ ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!