ಪುಣೆಯ ಈ ಅಂಗಡಿ ಬಿಳಿ ಬತಾಸಿನಲ್ಲಿ ಅದ್ಭುತವಾದ ʻಹಲ್ವಾ ದಾಗಿನೆʼ ಆಭರಣಕ್ಕೆ ಪ್ರಸಿದ್ಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಭರಣ, ಎಂದಾಕ್ಷಣ ನೆನಪಿಗೆ ಬರೋದೆ ಹೆಣ್ಣುಮಕ್ಕಳು. ತಹರೇವಾರಿ ಡಿಸೈನ್‌ಗಳು ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯ, ಪೇಪರ್ ಅಷ್ಟೇ ಯಾಕೆ ಮಣ್ಣಿನಿಂದಲೂ ಆಭರಣ ತಯಾರಿಸಿ ಹೆಂಗಳೆಯರ ಮನಸನ್ನು ಸೂರೆಗೊಳಿಸುತ್ತಿರುವ ಕಾಲವಿದು. ಜ್ಞಾನವೊಂದಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಇದು ಸೂಕ್ತ ನಿದರ್ಶನ.

ʻಅಂಜಲಿ ಅತುಲ್ ಪಾಧ್ಯೆʼ ಸಣ್ಣ ವಯಸ್ಸಿಗೇ ಬತಾಸಿನಲ್ಲಿ ಒಡವೆ ಪೋಣಿಸುವುದನ್ನು ಕರಗತ ಮಾಡಿಕೊಂಡವರು. 13 ವರ್ಷದ ಅಂಜಲಿ ತನ್ನ ತಾಯಿ ಮಡಿಲಲ್ಲಿ ತಲೆಯಿಟ್ಟು ಮಲಗಿ ಕೆಲ ಸಣ್ಣ ಬಿಳಿ ಬತಾಸುಗಳನ್ನು ತೆಗೆದುಕೊಂಡು ಒಂದು ದಾರದಲ್ಲಿ ಪೋಣಿಸುತ್ತಾ ಆ ವಯಸ್ಸಿನಲ್ಲೇ ಅಂದವಾದ ಆಭರಣ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಸತತ 25 ವರ್ಷಗಳಿಂದ ‘ಹಲ್ವಾ ದಾಗಿನೆ’ ಅಥವಾ ‘ಹಲ್ವಾಚೆ ದಗಿನಿ’ (ಬತಾಸು ಆಭರಣ) ತಯಾರಿಕೆ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

Halwa Dagine - sweet jewellery

ಮಹಾರಾಷ್ಟ್ರ ಸಂಪ್ರದಾಯದ ಪ್ರಕಾರ ನವವಿವಾಹಿತರು ತಮ್ಮ ಮದುವೆಯ ಮೊದಲ ವರ್ಷದಲ್ಲಿ ಮಕರ ಸಂಕ್ರಾಂತಿಯಂದು ಹಲ್ವಾ ದಾಗಿನೆಯನ್ನು ಧರಿಸಬೇಕು. ‘ಹಲ್ವಾ’ ಒಂದು ಸಿಹಿ ತಿನಿಸು. ಹಾಗಾಗಿ ನವ ವಧು ಹಲ್ವಾ ದಗಿನ ಆಭರಣವನ್ನು ಧರಿಸಿ ಸಿಹಿಯ ವರ್ಷವನ್ನು ಕಳೆಯಬೇಕೆಂಬ ನಿರೀಕ್ಷೆಯಿದೆ. ಮಕರ ಸಂಕ್ರಾಂತಿಯ ಹಬ್ಬದಲ್ಲಿ ಹಲ್ವಾ ದಾಗಿನೆಯನ್ನು ತಯಾರಿಸಲಾಗುತ್ತದೆ ಅಲ್ಲಿ ‘ತಿಳಗುಲ್ ಘ್ಯಾ ಗೊಡ್ ಗೊಡ್ ಬೋಲಾ’ ಎಂಬ ಪದವು ಶುಭಾಶಯವಾಗಿ ಕೇಳಿಬರುತ್ತದೆ. ಇದರ ಅರ್ಥ ಈ ಸಿಹಿ ತಿಂದು ಸಿಹಿಯಾಗಿ ಮಾತಾಡಿ ಎಂದರ್ಥ.

halwa dagine - sweet jewellery

ಅಂಜಲಿ ಅಂಥವರು ಹಲ್ವಾ ದಾಗಿನೆಯನ್ನು ಸಣ್ಣ ಪ್ರಮಾಣದಲ್ಲಿ ತಯಾರಿಸಬಹುದಾದರೂ, ಪುಣೆ ಮೂಲದ ಅಂಗಡಿ ಖೌವಾಲೆ ಪಾಟಂಕರ್ ಮೂರು ದಶಕಗಳಿಂದ ಬತಾಸು ಆಭರಣಗಳನ್ನು ತಯಾರಿಸುತ್ತಿದ್ದಾರೆ. ಖೌವಾಲೆ ಪಾಟಂಕರ್ ಅವರು ಮೊದಲು ಮಕ್ಕಳಿಗಾಗಿ 100 ಆಭರಣ ಸೆಟ್‌ಗಳು ಮತ್ತು ಮಹಿಳೆಯರಿಗೆ 60-70 ಸೆಟ್‌ಗಳೊಂದಿಗೆ ಪ್ರಾರಂಭಿಸಿದರು. ಆದರೆ ಇಂದು ಮಕ್ಕಳಿಗಾಗಿ ಸುಮಾರು 5,000 ಸೆಟ್‌ಗಳನ್ನು, ಮಹಿಳೆಯರಿಗೆ 2,500 ಸೆಟ್‌ಗಳನ್ನು ಮತ್ತು ಪುರುಷರ ಒಡವೆ ಕೂಡಾ ಮಾರಾಟ ಮಾಡುವುದಾಗಿ ತಿಳಿಸಿದರು.

ಬತಾಸಿನಲ್ಲಿ ಮಂಗಳಸೂತ್ರ, ನೆಕ್‌ಪೀಸ್‌, ಮಾಂಗ್ ಟಿಕ್ಕಾ (ಹೆಡ್‌ಪೀಸ್‌), ವಿಸ್ತಾರವಾದ ಮೂಗಿನ ಉಂಗುರಗಳು ಮತ್ತು ಪಾಯಲ್‌ಗಳು,  (ಆಂಕ್ಲೆಟ್‌ಗಳು) ‘ಕಮರ್ ಪಟ್ಟಾ’ (ಬೆಲ್ಟ್), ಕಿವಿಯೋಲೆಗಳು, ಬಳೆ, ಸರ, ಕಾಲು ಗೆಜ್ಜೆ, ನೆಕ್ಲೇಸ್ ಮಕ್ಕಳಿಗೆ ಸಂಬಂಧಿಸಿದ ಒಡವೆ ಹೀಗೆ ವಿವಿಧ ರೀತಿಯ ಎಲ್ಲಾ ಬಗೆಯ ಆಭರಣ ಲಭ್ಯವಿದೆ.

ಮಹಿಳೆಯರಿಗೆ ಅವರ ಸಿಂಗಲ್ ಪೀಸ್ ಆಭರಣಗಳು ರೂ 100 ರಿಂದ 300ರೂವರೆಗು ಇವೆ. ಮಕ್ಕಳ ಸಂಪೂರ್ಣ ಸೆಟ್ ರೂ 250-ರೂ 600 ರಷ್ಟಿದೆ. ಪುರುಷರ ಒಡವೆಗೆ 250 ರೂಪಾಯಿ ಬೆಲೆ ಇದೆ. ಈ ಆಭರಣಗಳನ್ನು ನವಜೋಡಿ, ನವಜಾರ ಶಿಶುಗಳಿಗೆಂದೇ ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ. ಈ ಒಡವೆ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಬೇಡಿಕೆಯಿದೆ ಅಂತಾರೆ ಅಂಗಡಿ ಮಾಲೀಕರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!