ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗ್ರಾಹಕರಿಗೆ ಸಿಹಿ ಸುದ್ದಿಕೊಟ್ಟ ಜಿಯೋ: ಇನ್ಮುಂದೆ ವಾಟ್ಸ್​ಆ್ಯಪ್​ ಮೂಲಕ ಸಿಗಲಿದೆ ಕೊರೋನಾ ಲಸಿಕೆ ಲಭ್ಯತೆಯ ಮಾಹಿತಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗ್ರಾಹಕರಿಗೆ ಕೊರೋನಾ ಲಸಿಕೆ ಒಡಗಿಸುವ ಸೇವೆಗೆ ಜಿಯೋ ಸಿದ್ಧವಾಗಿದ್ದು, ಬಳಕೆದಾರರಿಗೆ ಇತರ ಗ್ರಾಹಕ ಸೇವೆಗಳ ಜೊತೆಗೆ ವಾಟ್ಸ್​ಆ್ಯಪ್​ ಚಾಟ್‌ಬಾಟ್ ಮೂಲಕ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಪ್ರಾರಂಭಿಸಿದೆ ಎಂದು ರಿಲಯನ್ಸ್​ ಜಿಯೋ ತಿಳಿಸಿದೆ.
ಈ ಹೊಸ ಸೇವೆಯು ಮೂಲಕ ಕೋವಿಡ್ ಲಸಿಕೆಯ ಲಭ್ಯತೆಯನ್ನ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಒನ್​ಟೈಮ್​ ಪಾಸ್​ವರ್ಡ್​ ಮೂಲಕ ಈ ಮಾಹಿತಿಯನ್ನ ಸುಲಭವಾಗಿ ಪಡೆದುಕೊಳ್ಳಬಹುದು.
ಜಿಯೋ ಬಳಕೆದಾರರು ವಾಟ್ಸ್​ಆ್ಯಪ್​ ರೀಚಾರ್ಜ್ ಮಾಡಲು, ಪಾವತಿ ಮಾಡಲು, ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಮತ್ತು ಇತರರಲ್ಲಿ ಜಿಯೋ ಚಾಟ್‌ಚಾಟ್​ ಬಾಟ್​​​​ನಲ್ಲಿ ಬಳಸಬಹುದು. ಜೊತೆಗೆ COVID-19 ಲಸಿಕೆ ಲಭ್ಯತೆಯ ಮಾಹಿತಿಯನ್ನು ಸಹ ಒದಗಿಸುತ್ತಿದೆ.
700770007 ನಂಬರ್​ಗೆ ಹಾಯ್​ ಎಂದು ಟೈಪ್​ ಮಾಡುವ ಮೂಲಕ ಈ ಸೇವೆ ಆರಂಭವಾಗುವುದು. ಚಾಟ್‌ಬಾಟ್ ಇತರ ಮೊಬೈಲ್ ನೆಟ್‌ವರ್ಕ್‌ಗಳಲ್ಲಿನ ಬಳಕೆದಾರರಿಗೆ ಹಾಗೂ ಲಸಿಕೆ-ಸಂಬಂಧಿತ ಮಾಹಿತಿಗಾಗಿ ಮತ್ತು ಜಿಯೋ ಖಾತೆಯನ್ನು ರೀಚಾರ್ಜ್ ಮಾಡಲು ಕೆಲಸ ಮಾಡುತ್ತದೆ.
ಇನ್ನು ಇಲ್ಲಿ ಬಳಕೆದಾರರು ಚಾಟ್‌ನಲ್ಲಿ ‘ಪಿನ್‌ಕೋಡ್’ ಅನ್ನು ಪೋಸ್ಟ್ ಮಾಡುವ ಮೂಲಕ ಮತ್ತು ನೀವಿರುವ ಪ್ರದೇಶದ ಪಿನ್‌ಕೋಡ್ ಟೈಪ್ ಮಾಡುವ ಮೂಲಕ ಲಸಿಕಾ ಕೇಂದ್ರ ಮತ್ತು ಲಭ್ಯತೆಯನ್ನ ತಿಳಿದುಕೊಳ್ಳಬಹುದು.
ಜಿಯೋ ಬಳಕೆದಾರರು ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಸೇವೆ, ಜಿಯೋ ಸಿಮ್, ಜಿಯೋ ಫೈಬರ್, ಜಿಯೋಮಾರ್ಟ್ ಮತ್ತು ಚಾಟ್​​​ಬಾಟ್​ನಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಯನ್ನ ಸುಲಭವಾಗಿ ಪಡೆದುಕೊಳ್ಳಬಹುದು. ಜಿಯೋ ಅಲ್ಲದ ನೆಟ್‌ವರ್ಕ್ ಅಥವಾ ನೋಂದಾಯಿಸದ ಸಂಖ್ಯೆಯಿಂದ ಪ್ರವೇಶಿಸಿದರೆ ಖಾತೆ – ಸಂಬಂಧಿತ ಮಾಹಿತಿಯನ್ನು ನೀಡಬೇಕಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss