ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ. ಅವರ ಈ ದಿಢೀರ್ ಬದಲಾವಣೆ ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಖುಷಿ ನೀಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಿಮ್ಮ ಭವಿಷ್ಯವನ್ನು ದೇವರು ನಿರ್ಧರಿಸಲಿದ್ದಾನೆ. ಜನರ ಪ್ರೀತಿ ಮತ್ತು ಒತ್ತಾಯದಿಂದ ಬರುವ ತಿಂಗಳಿನಿಂದ (ಫೆಬ್ರವರಿ) ನಾನು ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲಿದ್ದೇನೆ. ನಿಮ್ಮ ಪ್ರೀತಿ ಮತ್ತು ಹಾರೈಕೆಗೆ ನಾನು ಚಿರಋಣಿ. ನಮ್ಮ ತಂಡಕ್ಕೆ ಸದಾ ಬೆಂಬಲ ನೀಡಿರಿ. ನಿಜವಾದ ಅಭಿಮಾನಿಗಳು ಕಠಿಣ ಸಮಯದಲ್ಲೂ ಬೆಂಬಲ ಸೂಚಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ಇನ್ಸ್ಟಾದಲ್ಲಿ ಯುವಿ ಬರೆದುಕೊಂಡಿದ್ದಾರೆ.
ಯುವಿಯ ಈ ನಿರ್ಧಾರಕ್ಕೆ ಅಭಿಮಾನಿಗಳು ಸಂಪಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ 2022ರಲ್ಲಿ ಸಿಕ್ಸರ್ ಸಾಮ್ರಾಟ್ ಯುವಿ ಕ್ರಿಕೆಟ್ ಮೈದಾನದಲ್ಲಿ ಓಡಾಡಲಿರುವ ದೃಶ್ಯವನ್ನು ಮತ್ತೆ ನೋಡುವ ಭಾಗ್ಯ ಸಿಗಲಿದೆ.
ನಿವೃತ್ತಿ ಬಳಿಕ ರೋಡ್ ಸೆಫ್ಟಿ ಟೂರ್ನಮೆಂಟ್ನಲ್ಲಿ ಇಂಡಿಯಾ ಲೆಜೆಂಡ್ ಪರವಾಗಿ ಕಣಕ್ಕಿಳಿದಿದ್ದರು.