ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಫುಡ್ ಡೆಲಿವರಿ ಅಪ್ಲಿಕೇಷನ್ ಸ್ವಿಗ್ಗೀ ಹೊಸ ರೆಸ್ಟೋರಂಟ್‌ಗಳನ್ನು ಪ್ರೋತ್ಸಾಹಿಸಲು ʼಸ್ವಿಗ್ಗಿ ಲಾಂಚ್‌ಪ್ಯಾಡ್ʼ ಎಂಬ ಯೋಜನೆಯೊಂದನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ ಸ್ವಿಗ್ಗಿ ಪ್ಲಾಟ್‌ಫಾರ್ಮ್ ಸೇರುವ ಹೊಸ ರೆಸ್ಟೋರಂಟ್ ಗಳಿಗೆ ಒಂದು ತಿಂಗಳು ಕಮಿಷನ್ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ.
“ಆನ್‌ಲೈನ್ ಫುಡ್ ಡಿಲೆವರಿ ವೇದಿಕೆಯನ್ನು ಬಳಸಿಕೊಂಡು ರೆಸ್ಟೋರಂಟ್ ಗಳು ತಮ್ಮ ಬೆಳವಣಿಗೆಗೆ ಹೊಸ ವೇಗ ತಂದುಕೊಡಬಹುದಾಗಿದೆ. ಹೊಸ ಹೋಟೆಲ್ ಗಳು ಮತ್ತು ಆಹಾರ ತಯಾರಕರಿಗೆ ಈ ಉಪಕ್ರಮ ಅನುಕೂಲ ಮಾಡಿಕೊಡಲಿದೆ. ಮೊದಲ ತಿಂಗಳು ಶೂನ್ಯ ಕಮಿಷನ್ ಸೌಲಭ್ಯವನ್ನು ನೀಡಲಾಗಿದೆ. ಇದು ರೆಸ್ಟೋರೆಂಟ್‌ಗಳ ಬೆಳವಣಿಗೆಗೆ ಪೂರಕವಾಗಲಿದೆ” ಎಂದು ಸ್ವಿಗ್ಗೀ ಹೇಳಿಕೆಯಲ್ಲಿ ತಿಳಿಸಿದೆ.