Saturday, March 25, 2023

Latest Posts

ತೀವ್ರ ವಿರೋಧದ ಬಳಿಕ ಹೋಳಿ ಹಬ್ಬದ ಮೊಟ್ಟೆ ಜಾಹೀರಾತನ್ನು ತೆಗೆದುಹಾಕಿದ ಸ್ವಿಗ್ಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೊಮ್ಮೆ ತೀರಾ ವಿಭಿನ್ನವಾಗಿ ಏನಾದರೂ ಮಾಡೋಕೆ ಹೋಗಿ ಅದು ಕುತ್ತಿಗೆಗೆ ಬರುತ್ತದೆ, ಅದೇ ಸ್ಥಿತಿ ಆಹಾರ ವಿತರಕ ಸಂಸ್ಥೆ ಸ್ವಿಗ್ಗಿಯದ್ದು! ಸ್ವಿಗ್ಗಿ ಹೋಳಿ ಹಬ್ಬಕ್ಕೆ ಮೊಟ್ಟೆಯನ್ನು ಹೊಂದಿದ ಜಾಹೀರಾತೊಂದನ್ನು ಸಿದ್ಧಪಡಿಸಿದ್ದು, ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧಕ್ಕೆ ಹೆದರಿದ ಸ್ವಿಗ್ಗಿ ಜಾಹೀರಾತನ್ನು ತೆಗೆದುಹಾಕಿದೆ.

ಜಾಹೀರಾತಿನಲ್ಲಿ ಏನಿದೆ?
ಮೊಟ್ಟೆಯನ್ನು ಏನೆಲ್ಲಾ ಮಾಡಬಹುದು? ಆಮ್ಲೆಟ್, ಹಾಫ್ ಬಾಯ್ಲ್ಡ್ ಮಾಡಿ ಆದರೆ ಯಾರ ತಲೆ ಮೇಲೂ ಹೊಡೆಯಬೇಡಿ ಎನ್ನುವ ಅರ್ಥದ ಜಾಹೀರಾತನ್ನು ಸ್ವಿಗ್ಗಿ ನೀಡಿತ್ತು.

ವಿರೋಧ ಯಾಕೆ?
ಈ ಜಾಹೀರಾತು ಹಿಂದೂ ವಿರೋಧಿಯಾಗಿದೆ ಎನ್ನುವುದು ಕೆಲವರ ಅಭಿಪ್ರಾಯವಾಗಿದ್ದು, ಟ್ವಿಟರ್‌ನಲ್ಲಿ ಹಿಂದೂಫೋಬಿಕ್‌ಸ್ವಿಗ್ಗಿ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಹೋಳಿ ಹಬ್ಬದಲ್ಲಿ ಮೊಟ್ಟೆಗಳನ್ನು ಹೊಡೆಯಬೇಡಿ ಎಂದು ಯಾಕೆ ಹೇಳಬೇಕು? ಇದು ಅನಗತ್ಯ. ಹಿಂದೂ ವಿರೋಧಿ ನಿಲುವು ಎನ್ನಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!