spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ವಿಂಗ್ ಸ್ಪೆಷಲಿಸ್ಟ್​ ಭುವನೇಶ್ವರ್ ಕುಮಾರ್ ಮನೆಯಲ್ಲಿ ಸಂಭ್ರಮ: ಹೆಣ್ಣು ಮಗುವಿಗೆ ಜನ್ಮ ನೀಡಿದ ಭುವಿ ಪತ್ನಿ ನೂಪುರ್

- Advertisement -Nitte

ಹೊಸ ದಿಗಂತ ಡಿಟಿಟಲ್‌ ಡೆಸ್ಕ್:‌

ಭಾರತ ಕ್ರಿಕೆಟ್‌ ತಂಡದ ಸ್ವಿಂಗ್ ಸ್ಪೆಷಲಿಸ್ಟ್​ ಭುವನೇಶ್ವರ್ ಕುಮಾರ್ ಪತ್ನಿ ನೂಪುರ್ ನಗರ್​ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮೀರತ್​ ಡಿಸ್ಟ್ರಿಕ್​ ಕ್ರಿಕೆಟ್​ ಅಸೋಸಿಯೇಷನ್​ನ ಖಜಾಂಚಿ ರಾಕೇಶ್​ ಗೋಯಲ್​ ಈ ಶುಭ ಸುದ್ದಿಯನ್ನು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಬುಧವಾರ ನವದೆಹಲಿಯ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನೂಪುರ್​ ತಮ್ಮ ಮೊದಲ ಮಗುವಿಗೆ ಜನ್ಮನೀಡಿದ್ದಾರೆ.
2012ರಂದು ಭುವನೇಶ್ವರ್ ಕುಮಾರ್ ತಮ್ಮ ಬಾಲ್ಯ ಸ್ನೇಹಿತೆಯಾಗಿದ್ದ ನೂಪುರ್ ನಗರ್​ ಅವರನ್ನು ವಿವಾಹವಾಗಿದ್ದರು.ನವೆಂಬರ್​ 23ರಂದು(ನಿನ್ನೆ) ಈ ಜೋಡಿಯ ವಿವಾಹ ವಾರ್ಷಿಕೋತ್ಸವವಾಗಿತ್ತು.
ಭುವನೇಶ್ವರ್ ಕುಮಾರ್​ ಇತ್ತೀಚೆಗೆ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿದ್ದರು. ಭುವಿ 3 ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss