spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಂತು ಹುಳು ಸಮಸ್ಯೆ ಜಾಸ್ತಿಯಾದರೆ ಈ ಲಕ್ಷಗಳು ಕಾಣಿಸುತ್ತವೆ: ನಿರ್ಲಕ್ಷಿಸದೇ ಈ ಮನೆಮದ್ದು ಟ್ರೈ ಮಾಡಿ…

- Advertisement -Nitte

ಹೆಚ್ಚಾಗಿ ತಾಯಿ ಎದೆ ಹಾಲು ಕುಡಿಯುವ ಮಕ್ಕಳಿಗೆ ಜಂತು ಹುಳದ ಸಮಸ್ಯೆ ಜಾಸ್ತಿ. ಮಕ್ಕಳಿಗೆ ಹೋಲಿಸದರೆ ದೊಡ್ಡವರಿಗೆ ಈ ಸಮಸ್ಯೆ ಪ್ರಮಾಣ ಕಡಿಮೆ. ಕಣ್ಣಿಗೆ ಕಾಣುವುದಿಲ್ಲ ಎಂದು ನೀವು ಈ ಜಂತು ಹುಳು ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಜಂತು ಹುಳುಗಳು ನಿಮ್ಮ ರೋಗ – ನಿರೋಧಕ ಶಕ್ತಿ ದಿನ ಕಳೆದಂತೆ ಕುಂಠಿತಗೊಳ್ಳುತ್ತದೆ. ದೇಹದ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಭಾಗದಲ್ಲಿ ವಿಪರೀತ ಹಾನಿಯಾಗುತ್ತದೆ.

ಲಕ್ಷಣಗಳು:

• ವಿಪರೀತ ಕೂದಲು ಉದುರುವುದು.
• ರಾತ್ರಿ ಮಲಗಿದಾಗ ಎಂಜಲು ಸುರಿಯುವುದು.
• ಮಲದಲ್ಲಿ ಬಿಳಿ ಹುಳಗಳು ಕಾಣಿಸುವುದು.
• ಮೈಕೈ ನೋವು, ಹೊಟ್ಟೆ ಕಚ್ಚುವುದು
• ಮೈ ನಡುಗುವುದು
• ಕೀಲುನೋವು
• ಮುಖದ ಕಣ್ಣಿನ ಭಾಗಗಳು ಊದಿಕೊಳ್ಳುವುದು.
• ಬಾಯಿ ವಾಸನೆ
• ಬೆವರು ವಾಸನೆ

ಜಂತು ಹುಳು ಸಮಸ್ಯೆ ಮನೆಮದ್ದು:

• ಕಹಿ ಬೇವಿನ ಎಲೆ ರಸವನ್ನು ಒಂದು ಚಮಚ ಆಗುವಷ್ಟು ತೆಗೆದು ಅದಕ್ಕೆ ಜೇನುತುಪ್ಪವನ್ನು ಸೇರಿಸಿಕೊಂಡು ಒಂದು ವಾರ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಜಂತು ಹುಳುನಿವಾಣೆಯಾಗುತ್ತದೆ.
• ಬೆಳ್ಳುಳ್ಳಿ ಹತ್ತು ಎಸಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಅದರ ನೀರನ್ನು ನಿತ್ಯ ಸೇವಿಸಿದರೆ ಜಂತು ಹುಳು ನಿವಾರಣೆಯಾಗುತ್ತದೆ.
• ಸಿಹಿ ಕುಂಬಳಕಾಯಿ ಬೀಜವನ್ನು ಪುಡಿಮಾಡಿ ಅದನ್ನು ನೀರಿನಲ್ಲಿ ಕುದಿಸಿ ಅದರ ನೀರು ತಣ್ಣಗಾದ ಮೇಲೆ ಕುಡಿಯಬೇಕು.
• ಬಾಳೆ ದಿಂಡಿನ ಕುಸುಂಬರಿಯನ್ನು ದಿನದಲ್ಲಿ ಒಮ್ಮೆ ಸೇವಿಸುತ್ತಾ ಬಂದರೆ ಜಂತು ಹುಳು ಸಮಸ್ಯೆ ಇರುವುದಿಲ್ಲ.
• ಜೇಷ್ಠ ಮದ್ದು ಮತ್ತು ಜಾಯಿಕಾಯನ್ನು ಒಂದು ಚಮಚ ತೇಯ್ದು ಅದನ್ನು ಸೇವಿಸಿ ಬೇಕು. ಇದನ್ನು ಚಿಕ್ಕ ಮಕ್ಕಳಿಗೂ ಕೊಡಬಹುದು.
• ಗೋ ಮೂತ್ರವನ್ನು ನಿತ್ಯ ಒಂದು ಚಮಚ ಸೇವಿಸಿದರೆ ಜಂತು ನಿವಾರಣೆಯಾಗುತ್ತದೆ. ಇದನ್ನು ಒಂದು ವಾರ ಮಾಡಬೇಕು

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss