ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ನಡುವಿನ ಟಿ-20 ಪಂದ್ಯಗಳಿಗೆ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಸಿಗಲಿದೆ.
ಕೋವಿಡ್ನ ಹಿನ್ನೆಲೆಯಲ್ಲಿ ಕ್ರೀಡಾಂಗಣವನ್ನು ಭರ್ತಿ ಮಾಡದಿರಲು ನಿರ್ಧರಿಸಲಾಗಿದೆ. ಹಾಗಾಗಿ ಅರ್ಧದಷ್ಟು ಸ್ಥಾನಗಳಿಗೆ ಮಾತ್ರ ಪ್ರೇಕ್ಷಕರಿಗೆ ಟಿಕೆಟ್ ದೊರಕಲಿದೆ.
ಪ್ರತಿಯೊಂದು ಪಂದ್ಯ ಮುಗಿದ ಬಳಿಕ ಇಡೀ ಕ್ರೀಡಾಂಗಣವನ್ನು ಸ್ಯಾನಿಟೈಸ್ ಮಾಡಲಾಗುವುದು. ಕೋವಿಡ್ ಮುಂಜಾಗ್ರತೆಯನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುವುದು.