ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ 20 ಸರಣಿಗೆ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಮುಂದಿನ ತಿಂಗಳು ಟಿ 20 ವಿಶ್ವಕಪ್ ನಡೆಯಲಿದ್ದು, ಪೂರ್ವಸಿದ್ಧತಾ ಅಭಿಯಾನವಾಗಿ ಸರಣಿ ನಡೆಯಲಿದೆ.
ಟೀಂ ಇಂಡಿಯಾದಲ್ಲಿ ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸಖತ್ ಫಾರ್ಮ್ನಲ್ಲಿದ್ದು, ತಂಡಕ್ಕೆ ಬಲ ಹೆಚ್ಚಾಗಿದೆ. ವಿರಾಟ್ ಏಷ್ಯಾಕಪ್ನ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದು, ಅಭಿಮಾನಿಗಳು ಈ ಬಾರಿಯೂ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಿದ್ದಾರೆ. ಇಂದು ನಡೆಯುವ ಪಂದ್ಯಕ್ಕೆ ತಾಲೀಮು ಜೋರಾಗಿದ್ದು, ಗೆಲ್ಲುವ ಭರವಸೆಯಲ್ಲಿ ತಂಡ ಇದೆ.