ಐರ್ಲೆಂಡ್‌ ವಿರುದ್ಧದ ಟಿ20 ಪಂದ್ಯ: ಟಾಸ್‌ ಗೆದ್ದ ಇಂಡಿಯಾ ಬ್ಯಾಟಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊದಲ ಪಂದ್ಯ ಗೆದ್ದ ಟೀಮ್ ಇಂಡಿಯಾ ಇಂದು ಆತಿಥೇಯ ಐರ್ಲೆಂಡ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಮತ್ತು ಅಂತಿಮ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುವ ನಿರ್ಧಾರ ಮಾಡಿದ್ದಾರೆ.
ನಿರೀಕ್ಷೆಯಂತೆ ಟೀಮ್ ಇಂಡಿಯಾ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತಂದುಕೊಂಡಿದೆ. ಗಾಯಾಳು ಋತುರಾಜ್‌ ಗಾಯಕ್ವಾಡ್‌ ಹೊರಗುಳಿದಿದ್ದು, ಅವರ ಜಾಗದಲ್ಲಿ ಸಂಜು ಸ್ಯಾಮ್ಸನ್‌ ಕಣಕ್ಕಿಳಿದಿದ್ದಾರೆ. ಅವೇಶ್‌ ಖಾನ್ ಮತ್ತು ಯುಜ್ವೇಂದ್ರ ಚಹಲ್‌ಗೆ ವಿಶ್ರಾಂತಿ ನೀಡಿ ಅವರ ಜಾಗದಲ್ಲಿ ರವಿ ಬಿಷ್ಣೋಯ್‌ ಮತ್ತು ಹರ್ಷಲ್‌ ಪಟೇಲ್‌ ಅವರನ್ನು ಆಡಿಸಲಾಗಿದೆ.

ಟೀಮ್ ಇಂಡಿಯಾ 
ದೀಪಕ್‌ ಹೂಡ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್‌ ಪಟೇಲ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್.

ಐರ್ಲೆಂಡ್‌ 
ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಗ್ಯಾರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ವಿಕೆಟ್‌ಕೀಪರ್‌), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೈರ್, ಆಂಡಿ ಮೆಕ್‌ಬ್ರೈನ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಕಾನರ್ ಓಲ್ಫರ್ಟ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!