ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಲಂಕನ್ನರಿಗೆ ಸೋಲಿನ ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದಲ್ಲಿ ಅದ್ಧೂರಿ ಆರಂಭ ಕಂಡಿರುವ ಟಿ 20 ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಅಚ್ಚರಿಯ ಪಲಿತಾಂಶ ಹೊರಬಿದ್ದಿದೆ.
ಭಾನುವಾರ ಜಿಲಾಂಗ್‌ನ ಕಾರ್ಡಿನಿಯಾ ಪಾರ್ಕ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ 1 ನೇ ಸುತ್ತಿನ ಆರಂಭಿಕ ಪಂದ್ಯದಲ್ಲಿ ನಮೀಬಿಯಾ 55 ರನ್‌ಗಳ ಭರ್ಜರಿ ಜಯದೊಂದಿಗೆ ಏಷ್ಯನ್ ಚಾಂಪಿಯನ್ ಶ್ರೀಲಂಕಾಕ್ಕೆ ಸೋಲಿನ ಶಾಕ್ ನೀಡಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ನಮೀಬಿಯಾ 7 ವಿಕೆಟ್‌ಗೆ 163 ರನ್‌ಗಳನ್ನು ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾವನ್ನು 19 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲಿನ ಮುಜುಗರ ಅನುಭವಿಸಿತು.
ಇದಕ್ಕೂ ಮೊದಲು, 15 ಓವರ್‌ ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 95 ರನ್‌ ಗಳಿಸಿದ್ದ ನಮೀಬಿಯಾ ಕೊನೆಯ 5 ಓವರ್‌ ಗಳಲ್ಲಿ ಅತ್ಯದ್ಭುತ ರೀತಿಯಲ್ಲಿ ಕಮ್‌ ಬ್ಯಾಕ್‌ ಮಾಡಿತು. ಫ್ರೈಲಿಂಕ್ 28 ಎಸೆತಗಳಲ್ಲಿ 44 ರನ್ ಗಳಿಸಿದರೆ, ಸ್ಮಿತ್ 16 ಎಸೆತಗಳಲ್ಲಿ 31 ರನ್ ಸಿಡಿಸಿ ತಂಡವನ್ನು 160 ರ ಗಡಿ ಮುಟ್ಟಿಸಿದರು. ಶ್ರೀಲಂಕಾ ಪರ, ಪ್ರಮೋದ್ ಮಧುಶನ್ ಎರಡು ವಿಕೆಟ್‌ಗಳನ್ನು ಪಡೆದರು. ಗುರಿ ಬೆನ್ನತ್ತಿದ ಲಂಕಾ ಪರ ಕ್ಯಾಪ್ಟನ್‌ ದಸುನ್‌ ಶನಾಕ 29 ರನ್‌ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ ಮನ್‌ ಗಳು ವಿಫಲರಾದರು. ನಮೀಬಿಯಾ ಪರ ಬೆನ್ ಶಿಕೊಂಗೊ, ಬರ್ನಾರ್ಡ್ ಸ್ಕೋಲ್ಟ್ಜ್, ಜಾನ್ ಫ್ರಿಲಿಂಕ್ ಮತ್ತು ಡೇವಿಡ್ ವೈಸ್ ತಲಾ ಎರಡು ವಿಕೆಟ್ ಪಡೆದರೆ, ಜೆಜೆ ಸ್ಮಿತ್ ಒಂದು ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!