ಟಿ.20 ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದ 16 ತಂಡಗಳಿವು…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟಿ 20 ವಿಶ್ವಕಪ್‌ ಬಿ ಗುಂಪಿನ ಕ್ವಾಲಿಫಯರ್‌ ಸೆಮಿಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿದ ನೆದರ್‌ಲ್ಯಾಂಡ್ ಹಾಗೂ ಜಿಂಬಾಬ್ವೆ ತಂಡಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ T20 ವಿಶ್ವಕಪ್‌ಗೆ ಅರ್ಹತೆ ಪಡೆದಿವೆ.

ಜಿಂಬಾಬ್ವೆಯಲ್ಲಿ ನಡೆದ ಮೊದಲ ಸೆಮೀಸ್‌ನಲ್ಲಿ ನೆದರ್ಲ್ಯಾಂಡ್‌ ತಂಡವು ಏಳು ವಿಕಟ್‌ ಗಳಿಂದ ಅಮೆರಿಕಾ ತಂಡವನ್ನು ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಜಿಂಬಾಂಬ್ವೆ ತಂಡವು ಪಪುವಾ ನ್ಯೂಗಿನಿ ತಂಡವನ್ನು 27 ರನ್‌ ಗಳಿಂದ ಸದೆ ಬಡಿಯುವ ಮೂಲಕ ವಿಶ್ವಕಪ್‌ ಗೆ ಟಿಕೆಟ್‌ ಗಿಟ್ಟಿಸಿಕೊಂಡಿದೆ.

ವಿಶ್ವಕಪ್‌ ನಲ್ಲಿ ಕಣಕ್ಕಿಳಿಯುವ 16 ತಂಡಗಳು:
ಇದೇ ಮೊದಲ ಬಾರಿಗೆ ಟಿ.20 ವಿಶ್ವಕಪ್‌ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಅಕ್ಟೋಬರ್ 16 ರಿಂದ ನವೆಂಬರ್ 13 ರ ವರೆಗೆ  ಏಳು ಆತಿಥೇಯ ನಗರಗಳಲ್ಲಿ ವಿಶ್ವಕಪ್‌ ಪಂದ್ಯಗಳು ನಡೆಯಲಿವೆ. ಭಾರತ ತಂಡವು ಪಾಕಿಸ್ತಾನ ವಿರುದ್ಧ ಅ.23ರಂದು ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭಿಸಲಿದೆ. ಅರ್ಹತೆ ಪಡೆದ ತಂಡಗಳನ್ನು A ಹಾಗೂ B ಎಂದು ವರ್ಗೀಕರಿಸಲಾಗಿದ್ದು, ಅಂತಿಮ ಗುಂಪುಗಳನ್ನು ಭಾನುವಾರ ಘೋಷಿಸಲಾಗುತ್ತದೆ.
ಆತಿಥೇಯ ಆಸ್ಟ್ರೇಲಿಯಾ, ಭಾರತ (01-ಟಿ.20 ರ‍್ಯಾಂಕಿಂಗ್‌- 270 ಪಾಯಿಂಟ್ಸ್) ಇಂಗ್ಲೆಂಡ್ (264), ಪಾಕಿಸ್ತಾನ (261), ದಕ್ಷಿಣ ಆಫ್ರಿಕಾ (255), ನ್ಯೂಜಿಲೆಂಡ್ (250), ವೆಸ್ಟ್ ಇಂಡೀಸ್ (242), ಶ್ರೀಲಂಕಾ (231), ಬಾಂಗ್ಲಾದೇಶ (230),
ಅಫ್ಘಾನಿಸ್ತಾನ (228) ವಿಶ್ವಕಪ್‌ ಗೆ ನೇರ ಅರ್ಹತೆ ಪಡೆದಿವೆ.
2021 ರ ವಿಶ್ವಕಪ್‌ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ತಂಡಗಳಾದ  ನಮೀಬಿಯಾ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಐರ್ಲೆಂಡ್‌, ಸ್ಕಾಟ್‌ ಲ್ಯಾಂಡ್‌ ತಂಡಗಳು ಸ್ವಯಂ ಅರ್ಹತೆ ಪಡೆದಿವೆ. ಇದೀಗ ನೆದರ್ಲ್ಯಾಂಡ್‌ ಹಾಗೂ ಜಿಂಬಾಬ್ವೆ ತಂಡಗಳು ಅರ್ಹತಾ ಸುತ್ತಿನಿಂದ ಆಯ್ಕೆಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!